alex Certify Viral Video: ಮೆಕ್ಸಿಕೋದಲ್ಲಿ ಸೇತುವೆಗೆ ಅಪ್ಪಳಿಸಿದ ಟ್ಯಾಂಕರ್; ಭಾರಿ ಅಗ್ನಿ ಅವಘಡ- ಮನೆಗಳು ಸುಟ್ಟು ಕರಕಲು, ಜನರ ಸ್ಥಳಾಂತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ಮೆಕ್ಸಿಕೋದಲ್ಲಿ ಸೇತುವೆಗೆ ಅಪ್ಪಳಿಸಿದ ಟ್ಯಾಂಕರ್; ಭಾರಿ ಅಗ್ನಿ ಅವಘಡ- ಮನೆಗಳು ಸುಟ್ಟು ಕರಕಲು, ಜನರ ಸ್ಥಳಾಂತರ

ಮೆಕ್ಸಿಕೋ: ಇಂಧನ ತುಂಬಿದ ಟ್ಯಾಂಕರ್ ಟ್ರಕ್​ ಒಂದು, ರೈಲು ಮಾರ್ಗದ ಬಳಿ ಇರುವ ಸೇತುವೆಗೆ ಅಪ್ಪಳಿಸಿದ ಪರಿಣಾಮ ಭಾರಿ ಅಗ್ನಿ ಅವಘಡ ಸಂಭವಿಸಿದ ಘಟನೆ ಮಧ್ಯ ಮೆಕ್ಸಿಕೋದಲ್ಲಿ ನಡೆದಿದೆ.

ಬೆಂಕಿಯ ಭೀಕರತೆ ಎಷ್ಟಿತ್ತು ಎಂದರೆ ಸಮೀಪದ ಮನೆಗಳು ಸುಟ್ಟು ಕರಕಲಾಗಿದ್ದು, ಇದರ ವಿಡಿಯೋ ವೈರಲ್​ ಆಗಿವೆ. ಪ್ರದೇಶದ ಸುತ್ತಲೂ ದಟ್ಟ ಹೊಗೆ ಆವರಿಸಿದೆ. ಹೆಚ್ಚಿನ ಅನಾಹುತಗಳನ್ನು ತಪ್ಪಿಸಲು ಅಧಿಕಾರಿಗಳು ಹರಸಾಹಸ ಪಟ್ಟು ಅಲ್ಲಿಯ ಜನರನ್ನು ಸಾಮೂಹಿಕ ಸ್ಥಳಾಂತರಗೊಳಿಸಿದರು. ಇದರ ಪರಿಣಾಮವಾಗಿ ಅದೃಷ್ಟವಶಾತ್, ಸ್ಥಳದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಟ್ಯಾಂಕರ್ ಓವರ್‌ಪಾಸ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಹತ್ತಿರದ ವಸತಿ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಅಗ್ವಾಸ್ಕಾಲಿಯೆಂಟೆಸ್ ಅಗ್ನಿಶಾಮಕ ಮುಖ್ಯಸ್ಥ ಮಿಗುಯೆಲ್ ಮುರಿಲ್ಲೊ ತಿಳಿಸಿದ್ದಾರೆ. ಸದ್ಯ ಸಮೀಪದಲ್ಲಿರುವ ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದ್ದು, ಜನರನ್ನು ರಕ್ಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಟ್ರಕ್ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಗ್ನಿ ಅನಾಹುತರದ ಭೀಕರತೆಯನ್ನು ತೋರಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...