alex Certify ರಷ್ಯಾ ಬಾಲೆಯ ಅದ್ಬುತ ನೃತ್ಯಕ್ಕೆ ಮನಸೋತ ಭಾರತೀಯರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾ ಬಾಲೆಯ ಅದ್ಬುತ ನೃತ್ಯಕ್ಕೆ ಮನಸೋತ ಭಾರತೀಯರು…!

ಇನ್ಸ್ಟಾಗ್ರಾಂನಲ್ಲಿ ಸದಾ ಒಂದಿಲ್ಲೊಂದು ವಿಶೇಷ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಬಾಲಿವುಡ್ ಹಾಗೂ ಇತರೆ ಹಾಡುಗಳಿಗೆ ನೃತ್ಯ ಮಾಡಿ ಹಲವಾರು ಮಂದಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇಂತಹ ಮನಸೂರೆಗೊಂಡ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲಿ ಡ್ಯಾನ್ಸ್ ಮೇರಿ ರಾಣಿ ಹಾಡು ಕೂಡ ಒಂದು. ಈ ಹಾಡಿಗೆ ಅನೇಕ ಮಂದಿ ನೃತ್ಯ ಮಾಡಿದ್ದು, ಇನ್ಸ್ಟಾಗ್ರಾಂನಲ್ಲಿ ಧೂಳೆಬ್ಬಿಸಿದ್ದಾರೆ. ಇದೀಗ ರಷ್ಯಾದ ಪುಟ್ಟ ಬಾಲೆಯ ಸರದಿ.

ಹೌದು, ನೋರಾ ಫತೇಹಿ ಅವರು ಮಾಡಿರುವ ಡ್ಯಾನ್ಸ್ ಮೇರಿ ರಾಣಿ ಹಾಡಿನ ನೃತ್ಯಕ್ಕೆ ರಷ್ಯಾದ ಬಾಲಕಿಯೊಬ್ಬಳು ಕುಣಿದು ಕುಪ್ಪಳಿಸಿದ್ದಾಳೆ. ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ನೋರಾ ಫತೇಹಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Economic Survey 2022: ಚಿಪ್ ಕೊರತೆಯಿಂದಾಗಿ 7 ಲಕ್ಷ ಕಾರುಗಳ ಆರ್ಡರ್‌ಗಳ ಡೆಲಿವರಿ ಇನ್ನೂ ಬಾಕಿ

ಎಸೆನ್ಯಾ ಎಂದು ಗುರುತಿಸಲ್ಪಟ್ಟ ಬಾಲಕಿಯು ಬಾಲಿವುಡ್ ಹಾಡಿಗೆ ಅದ್ಭುತವಾಗಿ ಕುಣಿದಿದ್ದಾಳೆ. ಈಕೆಯ ಮನೋಜ್ಞ ನೃತ್ಯಕ್ಕೆ ನೆಟ್ಟಿಗರು ಬೆರಗಾಗಿದ್ದಾರೆ. ಕೇವಲ ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋಗೆ 4 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಸಂಗ್ರಹಿಸಿದೆ. ಕಾಮೆಂಟ್ ವಿಭಾಗವು ಪ್ರೀತಿ ಮತ್ತು ಹೃದಯದ ಎಮೋಜಿಗಳಿಂದ ತುಂಬಿದೆ. ಪುಟ್ಟ ಬಾಲೆಯ ನೃತ್ಯವನ್ನು ಭಾರತೀಯರು ಮನಸಾರೆ ಇಷ್ಟಪಟ್ಟಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...