alex Certify ಮಾಸ್ಕ್ ಬಗ್ಗೆ ಪ್ರಶ್ನಿಸಿದ ವರದಿಗಾರ್ತಿಗೆ ವಿಚಿತ್ರ ಉತ್ತರ ನೀಡಿದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಬಗ್ಗೆ ಪ್ರಶ್ನಿಸಿದ ವರದಿಗಾರ್ತಿಗೆ ವಿಚಿತ್ರ ಉತ್ತರ ನೀಡಿದ ಜನ

ಅಲ್ಲರೀ , ಕೊರೊನಾ ಕೇಸ್‌ಗಳು ನಿತ್ಯವೂ ಲಕ್ಷಗಟ್ಟಲೇ ಬರುತ್ತಿವೆ. ಅಂದರೂ ನೀವು ಯಾಕೆ ಮಾಸ್ಕ್ ಹಾಕದೆಯೇ ರಸ್ತೆಗಳಲ್ಲಿ ಓಡಾಡುತ್ತಿದ್ದೀರಿ. ಮುನ್ನೆಚ್ಚರಿಕೆ ವಹಿಸುವ ಅರಿವು ಇಲ್ಲವೇ ಎಂದು ಟಿವಿ ಚಾನೆಲ್ ವರದಿಗಾರ್ತಿಯೊಬ್ಬರು ಜನರನ್ನು ಪ್ರಶ್ನಿಸುತ್ತಾ ಹೋಗುತ್ತಾಳೆ. ಅದಕ್ಕೆ ಜನರು ಕೊಡುವ ಥರಾವರಿ ಪ್ರತಿಕ್ರಿಯೆಗಳು ಯೂಟ್ಯೂಬ್‌ನ ವಿಡಿಯೊವೊಂದರಲ್ಲಿ ಭಾರಿ ವೀಕ್ಷಕರನ್ನು ಹೊಂದುತ್ತಿದೆ.
ಮೇಡಮ್, ಮಾಸ್ಕ್ ಹಾಕೊಂಡ್ರೆ ನನಗೆ ಆಗಲ್ಲರೀ ಎನ್ನುವ ವೃದ್ಧ ಒಂದು ಕಡೆ, ಮಾಸ್ಕ್ ಖರೀದಿಗೆ ದುಡ್ಡಿಲ್ಲ ಎನ್ನುವ ರಿಕ್ಷಾದವನೊಬ್ಬ ಮತ್ತೊಂದು ಕಡೆ ಕಾಣಸಿಗುತ್ತಾರೆ. ಅಲ್ಲಿಗೆ ದೇಶಾದ್ಯಂತ ಮಾಸ್ಕ್ ಧರಿಸುವುದು ಮುಂದಿನ ದಿನಗಳಲ್ಲಿ ಶೋಕಿಯಂತೆ ಆಗಲಿದೆ. ಅದರಲ್ಲೂ ಬಹಳಷ್ಟು ಮಂದಿ ಕೊರೊನಾದ ಭಯದಿಂದ ಹೊರಬಂದು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎನ್ನುವುದು ವಿಡಿಯೊದಲ್ಲಿನ ಪ್ರತಿಕ್ರಿಯೆಗಳಿಂದ ಬಯಲಾಗುತ್ತದೆ.

ವಿಡಿಯೊ ಕೊನೆಯಲ್ಲಿ ಚಾಚಾ ಎಂಬ ವೃದ್ಧ ವರದಿಗಾರ್ತಿಯು ಮೈಕ್ ಹಿಡಿದು ಬಂದ ಕೂಡಲೇ ಮುಖ ಮುಚ್ಚಿಕೊಂಡು ಓಡಿಯೇ ಹೋಗುತ್ತಾನೆ. ಪುಣ್ಯಾತ್ಮ. ಈ ಸಾಹೇಬರು ಮಾಸ್ಕ್ ಧರಿಸದೆಯೇ , ಎದುರು ಮಾಸ್ಕ್ ಧರಿಸಿದ್ದ ವ್ಯಕ್ತಿಯೊಬ್ಬರೊಂದಿಗೆ ಹರಟುತ್ತಾ ನಿಂತಿರುತ್ತಾರೆ.
ಜನರು ಮಾಸ್ಕ್ ತೊಡದೆಯೇ ಮುಂದೆ ಕೊರೊನಾ ಸೋಂಕಿಗೆ ತುತ್ತಾದರೆ, ಅವರ ಗಂಭೀರ ರೋಗಲಕ್ಷಣಗಳ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ನೂಕುನುಗ್ಗಲು ಉಂಟಾದರೆ ದೂಷಿಸುವುದು ಮಾತ್ರ ಸರಕಾರವನ್ನೇ ಎಂದು ವಿಡಿಯೊಗೆ ವೈದ್ಯರೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Viral Video: ಸಲ್ಮಾನ್ ಖಾನ್ ಹಾಡಿಗೆ ಸ್ಟೆಪ್ ಹಾಕಿ ರಂಜಿಸಿದ ಡಾನ್ಸಿಂಗ್ ಡ್ಯಾಡ್

ಓಮಿಕ್ರಾನ್ ರೂಪಾಂತರಿ ಹಾವಳಿಯಿಂದ ಕೊರೊನಾ ಕೇಸ್‌ಗಳು ಕಳೆದ ಒಂದು ವಾರದಿಂದ ನಿತ್ಯ ೨ ಲಕ್ಷಕ್ಕೂ ಹೆಚ್ಚು ವರದಿಯಾಗುತ್ತಿವೆ. ೧೩೦ ಕೋಟಿ ಜನಸಂಖ್ಯೆಯ ದೇಶದಲ್ಲಿ ೧೦ ಲಕ್ಷ ಜನರಿಗೆ ಒಂದೇ ಬಾರಿಗೆ ಕೊರೊನಾ ಸೋಂಕು ತಗುಲಿ, ಗಂಭೀರ ಅನಾರೋಗ್ಯ ಉಂಟಾದರೆ ಅವರೆಲ್ಲರಿಗೂ ಸೂಕ್ತ ಚಿಕಿತ್ಸೆ ಒದಗಿಸುವಲ್ಲಿ ದೇಶದ ಆರೋಗ್ಯ ಸೇವಾ ವ್ಯವಸ್ಥೆ ಪರದಾಡುವುದು ನಿಶ್ಚಿತ. ಈ ಅರಿವು ಮಾಸ್ಕ್ ಧರಿಸುವಾಗ ಜನಸಾಮಾನ್ಯರಿಗೆ ಇದ್ದರೆ ಒಳಿತು ಎನ್ನುವುದು ವೈದ್ಯರ ಕಿವಿಮಾತು.

https://www.instagram.com/tv/CYn5HF3K4D3/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...