alex Certify ಫೆಸಿಫಿಕ್ ಮಹಾಸಾಗರದ ಮೇಲೆ ಹಾರಾಡಿತಾ ಏಲಿಯನ್..? ಪೈಲಟ್ ತೆಗೆದಿರುವ ವಿಡಿಯೋ ನೋಡಿದ್ರೆ ದಂಗಾಗ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೆಸಿಫಿಕ್ ಮಹಾಸಾಗರದ ಮೇಲೆ ಹಾರಾಡಿತಾ ಏಲಿಯನ್..? ಪೈಲಟ್ ತೆಗೆದಿರುವ ವಿಡಿಯೋ ನೋಡಿದ್ರೆ ದಂಗಾಗ್ತೀರಾ..!

Viral Video: Pilot Spots Suspected UFOs Flying Over Pacific Ocean, People  Sayಅನ್ಯಗ್ರಹದಲ್ಲಿ ಜೀವಿಗಳಿವೆಯೇ ಎಂಬ ಬಗ್ಗೆ ವಿಜ್ಞಾನಿಗಳು ಇನ್ನೂ ಕೂಡ ಸಂಶೋಧನೆ ನಡೆಸುತ್ತಲೇ ಇದ್ದಾರೆ. ಆದರೂ ಏಲಿಯನ್ ಗಳಿವೆ ಎಂಬ ಬಗ್ಗೆ ಹಲವಾರು ಮಂದಿ ನಂಬಿದ್ದಾರೆ. ಈ ಏಲಿಯನ್ ಗಳು ಯಾವಾಗಲೂ ಕುತೂಹಲಕ್ಕೆ ಕಾರಣವಾಗುತ್ತದೆ. ಹಾರುವ ತಟ್ಟೆಯನ್ನು ನೋಡಿದ್ದಾಗಿ ಈ ಮೊದಲು ಕೆಲವರು ಹೇಳಿಕೊಂಡಿದ್ದರು. ಇದೀಗ ಫೆಸಿಫಿಕ್ ಮಹಾಸಾಗರದ ಮೇಲೆ ಏಲಿಯನ್ ಗಳನ್ನು ನೋಡಿದ್ದಾಗಿ ಪೈಲಟ್ ಒಬ್ಬರು ಹೇಳಿದ್ದಾರೆ.

ಶಂಕಿತ ಅನ್ಯಗ್ರಹ ಜೀವಿಗಳ ವಿಮಾನವು ಚಲಿಸುತ್ತಿದ್ದು, ಅದರ ದೀಪಗಳ ಮಾತ್ರ ಉರಿಯುತ್ತಿರುವ ದೃಶ್ಯವನ್ನು ಪೈಲಟ್ ವಿಡಿಯೋ ಮಾಡಿದ್ದಾರೆ. ಪೆಸಿಫಿಕ್ ಮಹಾಸಾಗರದ ಮೇಲೆ ದೀಪಗಳು ಮಾತ್ರ ಕಾಣುತ್ತಿದ್ದು, ಅವು ಚಲಿಸುತ್ತಿದೆ. ಆದರೆ, ಇದು ನಿಜವಾಗಿಯೂ ಏಲಿಯನ್ ಗಳದ್ದಾ ಎಂಬ ಬಗ್ಗೆ ಮಾತ್ರ ಇನ್ನೂ ಗೊತ್ತಾಗಿಲ್ಲ.

ಪೈಲಟ್ ಸೆರೆಹಿಡಿದಿರುವ ವಿಡಿಯೋದಲ್ಲಿ, ಮೂರು ಸಾಲುಗಳಲ್ಲಿ ಚಲಿಸುತ್ತಿರುವ ದೀಪಗಳನ್ನು ನೋಡಬಹುದು. ಒಂದರಲ್ಲಿ ನಾಲ್ಕು ಚುಕ್ಕೆಗಳು ಕಂಡು ಬಂದರೆ, ಮತ್ತೆ ಎರಡರಲ್ಲಿ ಮೂರು ಚುಕ್ಕೆಗಳು ಕಂಡು ಬಂದಿವೆ. ವರದಿಗಳ ಪ್ರಕಾರ, ವಿಡಿಯೋವನ್ನು 39,000 ಅಡಿ ಎತ್ತರದಲ್ಲಿ ಚಿತ್ರೀಕರಿಸಲಾಗಿದೆ. ಸ್ವಲ್ಪ ಸಮಯದ ನಂತರ ದೀಪಗಳು ಕಣ್ಮರೆಯಾಗಿದೆ.

ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕುತೂಹಲ ಕೆರಳಿಸಿದೆ. ದೀಪಗಳು ಯುದ್ಧನೌಕೆಯಿಂದ ಹೊಡೆದ ಕ್ಷಿಪಣಿಗಳಾಗಿರಬಹುದು ಅಂತಾ ಕೆಲವರು ಅಂದಾಜಿಸಿದ್ದಾರೆ. ಆದರೆ ಇಲ್ಲಿಯವರೆಗೆ ಅದೇನೆಂಬ ವಿಚಾರ ತಿಳಿಯಲಾಗಿಲ್ಲ.

ಇತ್ತೀಚೆಗೆ, ಪಂಜಾಬ್‌ನ ನಾಗರಿಕರು ರಾತ್ರಿ ವೇಳೆ ಆಕಾಶದಲ್ಲಿ ಪ್ರಕಾಶಮಾನವಾದ ದೀಪಗಳ ನಿಗೂಢ ರೇಖೆಯನ್ನು ನೋಡಿದ್ದಾಗಿ ವರದಿಯಾಗಿತ್ತು. ನಂತರ ಅದನ್ನು ಉಪಗ್ರಹ ಎಂದು ಸ್ಪಷ್ಟಪಡಿಸಲಾಯಿತು.

— Chillz TV (@ChillzTV) December 7, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...