alex Certify ಬಾತ್​ರೂಮ್​ನಲ್ಲಿ ಮನುಷ್ಯರಷ್ಟೇ ಅಲ್ಲ…… ಗಿಳಿಗಳೂ ಹಾಡುತ್ತವೆ….! ಇಲ್ಲಿದೆ​ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾತ್​ರೂಮ್​ನಲ್ಲಿ ಮನುಷ್ಯರಷ್ಟೇ ಅಲ್ಲ…… ಗಿಳಿಗಳೂ ಹಾಡುತ್ತವೆ….! ಇಲ್ಲಿದೆ​ ವಿಡಿಯೋ

ಗಿಳಿಗಳ ಮಾತೇ ಅಂದ. ಅವುಗಳ ಮಾತುಗಳನ್ನು ಕೇಳುವುದೆಂದರೆ ತುಂಬಾ ಹಿತಕರ. ಮನುಷ್ಯನಂತೆಯೇ ಮಾತನಾಡುವ ಸಾಮರ್ಥ್ಯ ಹೊಂದಿರುವ ಗಿಳಿಗಳನ್ನು ಸಾಕುವವರು ಹಲವರಿದ್ದಾರೆ. ಅವುಗಳಿಗೆ ಮನುಷ್ಯರಂತೆ ಮಾತುಗಳನ್ನೂ ಕಲಿಸುತ್ತಾರೆ.

ಇಂಥದ್ದೇ ಒಂದು ಮುದ್ದಾದ ಗಿಳಿಯ ಮಾತಿನ ವಿಡಿಯೋ ಇದೀಗ ವೈರಲ್​ ಆಗಿದೆ. ಗಿಳಿಯೊಂದು ಮಾತನ್ನಷ್ಟೇ ಅಲ್ಲದೇ ಹಾಡು ಕೂಡ ಹೇಳುವ ಸಾಮರ್ಥ್ಯ ಹೊಂದಿದ್ದು, ಗಿಳಿ ಹಾಡು ಹೇಳುವ ವಿಡಿಯೋ ಇದಾಗಿದೆ.

ಈ ವಿಡಿಯೋದ ಆರಂಭದಲ್ಲಿ ಹಾಡೊಂದು ಕೇಳಿಬರುತ್ತದೆ. ಯಾರೋ ಚಿಕ್ಕಮಕ್ಕಳು ಬಾತ್​ರೂಮಿನಲ್ಲಿ ಕುಳಿತು ಹಾಡು ಹಾಡುತ್ತಿರಬಹುದು ಎನ್ನಿಸುತ್ತದೆ. ಆದರೆ ಬಾತ್​ರೂಮಿನ ಬಾಗಿಲು ತೆಗೆದಾಗಲೇ ಗೊತ್ತಾಗುವುದು ಅಲ್ಲಿರುವುದು ಮನುಷ್ಯರಲ್ಲ, ಬದಲಿಗೆ ಗಿಳಿ ಎಂದು. ಕಮೋಡ್ ಮೇಲೆ ಕುಳಿತ ಗಿಳಿ ಜೋರಾಗಿ ಮನುಷ್ಯರ ಭಾಷೆಯಲ್ಲಿಯೇ ಹಾಡು ಹೇಳುವುದನ್ನು ಕೇಳಿ ನಿಜಕ್ಕೂ ಅಚ್ಚರಿಯಾಗುತ್ತದೆ.

ಮುದ್ದಾದ ಮತ್ತು ತಮಾಷೆಯ ಪ್ರಾಣಿಗಳ ವಿಡಿಯೋಗಳನ್ನು ನಿಯಮಿತವಾಗಿ ಹಂಚಿಕೊಳ್ಳುವ ‘buitengebieden’ ಪುಟದಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದ್ದು, ಗಿಳಿಯ ಕ್ಯೂಟ್​ ಹಾಡಿಗೆ ಮನಸೋಲದವರೇ ಇಲ್ಲ ಎನ್ನಬಹುದೇನೋ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...