alex Certify ಕೊಳಚೆ ನೀರಿನಲ್ಲಿ ಆಟವಾಡಿದ ರಾಷ್ಟ್ರ ರಾಜಧಾನಿ ಜನತೆ : ಹುಬ್ಬೇರಿಸಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಳಚೆ ನೀರಿನಲ್ಲಿ ಆಟವಾಡಿದ ರಾಷ್ಟ್ರ ರಾಜಧಾನಿ ಜನತೆ : ಹುಬ್ಬೇರಿಸಿದ ನೆಟ್ಟಿಗರು

ಶನಿವಾರದಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಡಬಿಡದೇ ಮಳೆ ಸುರಿದಿದ್ದು ದೆಹಲಿಯ ಕೆಲವು ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಭಾನುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಯಮುನಾ ನದಿಯ ನೀರಿನ ಮಟ್ಟ 206.02 ಮೀಟರ್​​​ ದಾಖಲಾಗಿದೆ.

ದೆಹಲಿಯ ಹಲವು ಭಾಗಗಳಲ್ಲಿ ತೀವ್ರವಾದ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ರಸ್ತೆಗಳಲ್ಲಿ ಹೊಂಡದಲ್ಲಿ ತುಂಬಿರುವ ನೀರಿನಲ್ಲಿ ಮಕ್ಕಳು ಹಾಗೂ ಹಿರಿಯರು ಆಟವಾಡಿದ ವಿಡಿಯೋ ವೈರಲ್​ ಆಗಿದೆ.

ಗಬ್ಬರ್​ ಸಿಂಗ್​ ಹೆಸರಿನ ಟ್ವಿಟರ್​​ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್​ ಮಾಡಲಾಗಿದೆ. ಈ ವಿಡಿಯೋದಲ್ಲಿ ಜನರು ಚರಂಡಿ ನೀರಿನಲ್ಲಿ ಆಟವಾಡಿದ್ದಾರೆ. ಭಾರತೀಯರಿಗೆ ಉಚಿತವಾಗಿ ಅಮ್ಯೂಸ್​ಮೆಂಟ್​ ಪಾರ್ಕ್​ಗಳ ಅಗತ್ಯವಿದೆ. ಇವರೆಲ್ಲ ಮೋಜಿಗಾಗಿ ಚರಂಡಿ ನೀರಿನಲ್ಲಿ ಆಟವಾಡುತ್ತಿದ್ದಾರೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಹಿರಿಯರು ನೀರಿನಲ್ಲಿ ಮಲಗಿಕೊಂಡು ಮೋಜು ಮಾಡಿದ್ದ ಇಷ್ಟು ಕೊಳಕು ನೀರಿನಲ್ಲಿ ಹೀಗೆಲ್ಲ ಆಡಬಹುದೇ ಎಂದು ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

— Gabbar (@GabbbarSingh) July 15, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...