alex Certify ನಯಾಗರ ಜಲಪಾತದ ಮೇಲೆ ಮೂಡಿದ ಕಾಮನಬಿಲ್ಲು; ಪ್ರಕೃತಿ ವೈಭವದ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಯಾಗರ ಜಲಪಾತದ ಮೇಲೆ ಮೂಡಿದ ಕಾಮನಬಿಲ್ಲು; ಪ್ರಕೃತಿ ವೈಭವದ ಫೋಟೋ ವೈರಲ್

ಪ್ರಕೃತಿ ಮತ್ತು ಅದರ ವೈಭವವು ಎಂದಿಗೂ ವಿಸ್ಮಯ. ನಮ್ಮನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿರುವ ಅನೇಕ ವಿಷಯಗಳು ಪ್ರಕೃತಿಯಲ್ಲಿವೆ. ಇದಕ್ಕೊಂದು ತಾಜಾ ಉದಾಹರಣೆಯಾಗಿ ವಿಡಿಯೋ ಒಂದು ವೈರಲ್​ ಆಗಿದೆ.

ಭವ್ಯವಾದ ನಯಾಗಾರ ಜಲಪಾತದ ಮೇಲೆ ಕಾಮನ ಬಿಲ್ಲು ಮೂಡಿರುವ ವಿಡಿಯೋ ಕ್ಲಿಪ್​ ವೈರಲ್​ ಆಗಿದ್ದು, ಅತೀ ಕಡಿಮೆ ಅವಧಿಯಲ್ಲಿ 32 ಮಿಲಿಯನ್​ ವೀಕ್ಷಣೆ ಪಡೆದುಕೊಂಡಿದೆ.

ವಿಡಿಯೊವನ್ನು ಶಂಪಾ ಎಂಬ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದಾರೆ. ಕಿರು ಕ್ಲಿಪ್​ನಲ್ಲಿ ಯುಎಸ್​ನ ನಯಾಗಾರ ಜಲಪಾತದ ಭವ್ಯವಾದ ನೋಟವನ್ನು ಕಾಣಬಹುದು. ಜಲಪಾತದ ಮೇಲೆ ಹೊಳೆಯುತ್ತಿದ್ದ ವರ್ಣರಂಜಿತ ಕಾಮನಬಿಲ್ಲು ಜಲಪಾತದ ಸೌಂದರ್ಯವನ್ನು ದುಪ್ಪಟ್ಟುಗೊಳಿಸಿದೆ.

“ಅಪರೂಪದ ದೃಶ್ಯ. ಜಲಪಾತದ ಮೇಲೆ ಪೂರ್ಣ ಕಾಮನಬಿಲ್ಲು. ಸುಂದರವಾದ ದೃಶ್ಯ’ ಎಂದು ಪೋಸ್ಟ್​ನ ಶೀರ್ಷಿಕೆ ಇದೆ. ಅಂದವಾದ ಮತ್ತು ಅಪರೂಪದ ದೃಶ್ಯದಿಂದ ನೆಟ್ಟಿಗರು ಫಿದಾ ಆಗಿದ್ದು, ಕಾಮೆಂಟ್​ ವಿಭಾಗದಲ್ಲಿ ತಮಗನಿಸಿದ್ದನ್ನು ಕಾವ್ಯಾತ್ಮಕವಾಗಿ ಬರೆದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...