alex Certify ಪುಡಿಯೂ ಅಲ್ಲ, ಬಣ್ಣವೂ ಇಲ್ಲ, ಹೂವೂ ಕೂಡಾ ಅಲ್ಲ…! ದೀಪಾವಳಿಗೆ ದಾರ – ಮೊಳೆಯ ಅಪರೂಪದ ರಂಗೋಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಡಿಯೂ ಅಲ್ಲ, ಬಣ್ಣವೂ ಇಲ್ಲ, ಹೂವೂ ಕೂಡಾ ಅಲ್ಲ…! ದೀಪಾವಳಿಗೆ ದಾರ – ಮೊಳೆಯ ಅಪರೂಪದ ರಂಗೋಲಿ

ನವದೆಹಲಿ: ಇನ್ನೇನು ದೀಪಾವಳಿ ಸಮೀಪಿಸುತ್ತಿದೆ. ಎಲ್ಲೆಡೆ ವಿಧ ವಿಧ ನಮೂನೆಯ ರಂಗೋಲಿಗಳು ಮನೆಯಂಗಳನ್ನು ತುಂಬಲಿವೆ. ಆದರೆ ಈಗ ವೈರಲ್​ ಆಗಿರುವ ರಂಗೋಲಿ ಮಾತ್ರ ಸಾಮಾನ್ಯದ್ದಲ್ಲ. ರಂಗೋಲಿ ಪುಡಿ, ಹೂವು, ವಿವಿಧ ರೀತಿಯ ಬಣ್ಣಗಳನ್ನು ಬಳಸಿ ರಂಗೋಲಿ ಬಿಡಿಸುವುದು ಸಾಮಾನ್ಯ. ಆದರೆ ಈಗ ವೈರಲ್​ ಆಗಿರುವ ಈ ವಿಡಿಯೋದಲ್ಲಿನ ರಂಗೋಲಿ ಬೇರೆಯದ್ದೇ ರೀತಿಯ ವಿಶೇಷತೆ ಹೊಂದಿದೆ.

ಮೊಳೆ ಮತ್ತು ದಾರಗಳಿಂದ ಈ ರಂಗೋಲಿ ಚಿತ್ರೀಕರಿಸಲಾಗಿದೆ. ಮೊಳೆಯನ್ನು ಒಂದು ಮರದ ತುಂಡಿಗೆ ಜೋಡಿಸಿಕೊಂಡು ಉಲ್ಲನ್​ ದಾರದಲ್ಲಿ ವಿಧವಿಧ ರೀತಿಯಲ್ಲಿ ಎಳೆಹಾಕಿ ಅದಕ್ಕೊಂದು ಸುಂದರ ರೂಪು ನೀಡುವುದು ಹೊಸತೇನೂ ಅಲ್ಲ, ಇದಾಗಲೇ ಕೆಲವು ಶಾಲಾ-ಕಾಲೇಜುಗಳಲ್ಲಿಯೂ ಮಕ್ಕಳಿಗೆ ಇದನ್ನು ಕಲಿಸಿಕೊಡುತ್ತಾರೆ. ಆದರೆ ದೆಹಲಿಯ ಈ ಮಹಿಳೆ ಹಾಕಿರುವ ಅಪರೂಪದ ಸುಂದರ ಚಿತ್ರ ಮಾತ್ರ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ.

“ದೆಹಲಿಯ ತಣ್ಣನೆಯ ಮಳೆಯಲ್ಲಿ, ಇದನ್ನು ಪೂರ್ಣಗೊಳಿಸಲು ನನಗೆ ಎರಡು ದಿನಗಳು ಬೇಕಾಯಿತು” ಎಂದು ಮಹಿಳೆ ಹೇಳಿಕೊಂಡಿದ್ದಾರೆ. “ನಾನು ಈ ದೀಪಾವಳಿಗಾಗಿ ಅತಿರಂಜಿತವಾದದ್ದನ್ನು ಹುಡುಕುತ್ತಿದ್ದೆ ಮತ್ತು ಈ ಸ್ಟ್ರಿಂಗ್ ಆರ್ಟ್ ನನ್ನ ಮನ ಗೆದ್ದಿತು. ಅದಕ್ಕಾಗಿ ನಾನು ಇದನ್ನು ಕೈಗೆತ್ತಿಕೊಂಡೆ” ಎಂದು ಮಹಿಳೆ ಹೇಳಿದ್ದಾರೆ. ಈ ಅಪರೂಪದ ಕಲೆಗೆ ನೆಟ್ಟಿಗರು ಫಿದಾ ಆಗಿದ್ದು, ಥಹರೇವಾರಿ ಕಮೆಂಟ್​ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...