alex Certify ‘ಮೇರಾ ದಿಲ್ ಯೇ ಪುಕಾರೆ ಆಜಾ’ಗೆ ಮಿಸ್ಟರ್​ ಬೀನ್​ನಿಂದ ನೃತ್ಯ: ನಕ್ಕೂ ನಕ್ಕೂ ಸುಸ್ತಾಗ್ತಿರೋ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೇರಾ ದಿಲ್ ಯೇ ಪುಕಾರೆ ಆಜಾ’ಗೆ ಮಿಸ್ಟರ್​ ಬೀನ್​ನಿಂದ ನೃತ್ಯ: ನಕ್ಕೂ ನಕ್ಕೂ ಸುಸ್ತಾಗ್ತಿರೋ ನೆಟ್ಟಿಗರು

ಇತ್ತೀಚೆಗೆ, ಮದುವೆಯ ಆರತಕ್ಷತೆಯಲ್ಲಿ ‘ಮೇರಾ ದಿಲ್ ಯೇ ಪುಕಾರೆ ಆಜಾ’ಗೆ ಪಾಕಿಸ್ತಾನಿ ಹುಡುಗಿ ಆಯೇಷಾ ನೃತ್ಯ ಮಾಡಿದ ವಿಡಿಯೋ ಒಂದನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದರು. ಇದು ಕ್ರೇಜಿ ಎನ್ನುವಷ್ಟರ ಮಟ್ಟಿಗೆ ವೈರಲ್​ ಆಗಿತ್ತು. ಇದರ ಬೆನ್ನಲ್ಲೇ ಈ ಹಾಡು ಇನ್​ಸ್ಟಾಗ್ರಾಮ್​ನಲ್ಲಿ ಟ್ರೆಂಡ್​ ಆಗಲು ಶುರುವಾಗಿದ್ದು, ಈ ಹಾಡಿನ ಹಾಗೂ ನೃತ್ಯದ ಮರುಸೃಷ್ಟಿ ಮಾಡುವಲ್ಲಿ ಯುವ ಜನರು ಮುಂದಾಗುತ್ತಿದ್ದಾರೆ.

ಇದೇ ಹಾಡನ್ನು ಇಟ್ಟುಕೊಂಡು ತಮಾಷೆ ಮತ್ತು ಸೃಜನಶೀಲ ರೀಲ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಅವುಗಳಲ್ಲಿ ಒಂದು ಇದೀಗ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಮಿಸ್ಟರ್ ಬೀನ್ ನೃತ್ಯ ಮಾಡುತ್ತಿದ್ದಾನೆ! ಮಿಸ್ಟರ್ ಬೀನ್ ಹಾಲಿಡೇ ಚಲನಚಿತ್ರದಿಂದ ಪ್ರಸಿದ್ಧ ಹಾಸ್ಯನಟ ಮತ್ತು ನಟ ರೋವನ್ ಅಟ್ಕಿನ್ಸನ್ ನಟಿಸಿದ್ದಾರೆ. ಮಿಸ್ಟರ್ ಬೀನ್‌ ಚಲನಚಿತ್ರಗಳು ರಂಜಿಸುವಂತೆ ಈ ಹಾಡು ಕೂಡ ಸಕತ್​ ವೈರಲ್​ ಆಗುತ್ತಿದೆ.

ಲತಾ ಮಂಗೇಶ್ಕರ್ ಅವರ ಹಿಟ್ ಟ್ರ್ಯಾಕ್ ‘ಮೇರಾ ದಿಲ್ ಯೇ ಪುಕಾರೆ ಆಜಾ’ ನ ಆಕರ್ಷಕ ರೀಮಿಕ್ಸ್ ಬೀಟ್‌ಗಳಿಗೆ ಮಿಸ್ಟರ್ ಬೀನ್ ಹೆಜ್ಜೆ ಹಾಕುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ವಿಡಿಯೋ ನೋಡಿ ಮಿಸ್ಟರ್​ ಬೀನ್​ ನೃತ್ಯಕ್ಕೆ ಜನರು ಫಿದಾ ಆಗಿದ್ದಾರೆ.
‘frk.magazine’ ಹಂಚಿಕೊಂಡ ಈ ವಿಡಿಯೋ ಇದಾಗಲೇ 4.2 ಮಿಲಿಯನ್ ವೀಕ್ಷಣೆಗಳು ಮತ್ತು 164k ಲೈಕ್ಸ್​ ಪಡೆದುಕೊಂಡಿವೆ. ಈ ನೃತ್ಯವು ಮೂಲಕ್ಕಿಂತಲೂ ಉತ್ತಮವಾಗಿದೆ ಎಂದು ಹಲವರು ಹೇಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...