alex Certify ಬ್ಯಾಗ್​ ಜಿಪ್​ ತೆಗೆದು ಹಣ್ಣು ಎತ್ತಿಕೊಂಡ ಕಿಲಾಡಿ ಕೋತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಗ್​ ಜಿಪ್​ ತೆಗೆದು ಹಣ್ಣು ಎತ್ತಿಕೊಂಡ ಕಿಲಾಡಿ ಕೋತಿ..!

ಮಂಗಗಳ ಚೇಷ್ಟೆ ಮಾಡುವ ವಿಡಿಯೋಗಳಿಗೇನು ಸಾಮಾಜಿಕ ಜಾಲತಾಣದಲ್ಲಿ ಕೊರತೆ ಇಲ್ಲ. ಅವುಗಳ ಚೇಷ್ಟೆಗಳು ನೋಡಲು ಸಾಕಷ್ಟು ಮುದ್ದಾಗಿರುತ್ತವೆ.

ಕೋತಿಗಳು ಪ್ರವಾಸಿ ತಾಣಗಳಲ್ಲಿ ಜನರನ್ನು ಗೋಳು ಹೊಯ್ದುಕೊಳ್ಳುವ, ಬ್ಯಾಗ್​- ಕವರ್​ಗಳನ್ನು ಹೊತ್ತೊಯ್ಯುವ ಸಂದರ್ಭಗಳು ಅನೇಕ. ಈಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.

ಕೋತಿಯು ವ್ಯಕ್ತಿಯೊಬ್ಬರ ಬ್ಯಾಗ್​ನಿಂದ ವಸ್ತುಗಳನ್ನು ಕದ್ದು ಓಡಿಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಎರಡು ದಿನಗಳ ಹಿಂದೆ ಇನ್​ಸ್ಟಾಗ್ರಾಮ್​ನಲ್ಲಿ ವಾವ್​ ಆಫ್ರಿಕಾ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ.

ಬ್ಯಾಕ್​ ಪ್ಯಾಕ್​ ಅನ್ನು ಅನ್ಜಿಪ್​ ಮಾಡುವ ಕೋತಿ, ಚೀಲದೊಳಗೆ ಇಣುಕಿ ನೋಡುತ್ತದೆ, ನಂತರ ಅದು ಎರಡನೇ ಜಿಪ್​ ಅನ್ನು ತೆರೆಯುತ್ತದೆ, ಬಳಿಕ ಒಳಗಿನಿಂದ ಸೇಬನ್ನು ತೆಗೆದುಕೊಂಡು ಓಡಿಹೋಗುತ್ತದೆ.

ಅದನ್ನು ಹಂಚಿಕೊಂಡ ನಂತರ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು, 6,000ಕ್ಕೂ ಹೆಚ್ಚು ಲೈಕ್​ ಸ್ವೀಕರಿಸಿದೆ. ಅನೇಕರು ರಂಜನೀಯ ಕಾಮೆಂಟ್​ ಮಾಡಿದ್ದಾರೆ.

ಮಂಕಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಶೇರ್​ ಆಗುತ್ತಿರುತ್ತವೆ. ಕಳೆದ ತಿಂಗಳು ಮಥುರಾದ ವೃಂದಾವನದಲ್ಲಿ ಕೋತಿಯೊಂದು ಜಿಲ್ಲಾಧಿಕಾರಿಗಳ ಕನ್ನಡಕವನ್ನು ಕಿತ್ತುಕೊಂಡಿರುವ ವಿಡಿಯೋ ವೈರಲ್​ ಆಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...