alex Certify ದಂಗಾಗಿಸುತ್ತೆ ಈ ಕೋತಿಯ ಫ್ಯಾಷನ್‌ ಪ್ರೀತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ಈ ಕೋತಿಯ ಫ್ಯಾಷನ್‌ ಪ್ರೀತಿ….!

ಕೋತಿಗಳು ಕೂಡ ಅತಿ ಬುದ್ಧಿವಂತ ಪ್ರಾಣಿಗಳಾಗಿವೆ. ಇವುಗಳು ಮನುಷ್ಯರನ್ನು ಅನುಕರಿಸುವ ಹಲವಾರು ವಿಡಿಯೋಗಳನ್ನು ನೀವು ಬಹುಶಃ ನೋಡಿರುತ್ತೀರಿ. ಕೆಲವು ವಿಡಿಯೋಗಳು ಕುತೂಹಲ ಮೂಡಿಸಿದ್ರೆ, ಇನ್ನು ಕೆಲವು ನಗೆ ತರಿಸುತ್ತದೆ.

ಇದೀಗ ಕೋತಿಯೊಂದು ಸಲೂನ್ ನಲ್ಲಿ ಟ್ರಿಮ್ ಮಾಡಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೋತಿ ಸಲೂನ್‌ನಲ್ಲಿ ಕನ್ನಡಿಯ ಮುಂದೆ ಕುರ್ಚಿಯ ಮೇಲೆ ಆರಾಮಾಗಿ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸಾಮಾನ್ಯವಾಗಿ ನೀವು ಪಾರ್ಲರ್ ಹೋದಾಗ ಯಾವ ರೀತಿಯಲ್ಲಿ ನಿಮ್ಮನ್ನು ಟ್ರೀಟ್ ಮಾಡುತ್ತಾರೋ, ಅದೇ ಗೌರವವನ್ನು ಕೋತಿ ಕೂಡ ಪಡೆದುಕೊಂಡಿದೆ.

ʼಸೂರ್ಯವಂಶಿʼಯ ಅಕ್ಷಯ್-ಕತ್ರಿನಾ ನೆನಪಿಸಿದ ಇಂಡೋನೇಷ್ಯಾ ಜೋಡಿಯ ಡಾನ್ಸ್

ಕೋತಿಯ ಕಾಲರ್‌ಗೆ ಬಟ್ಟೆ ಸುತ್ತಲಾಗಿದೆ. ಕೇಶ ವಿನ್ಯಾಸಕಿ ಅದರ ಮುಖದ ಕೂದಲನ್ನು ಬಾಚಿದ್ದಾರೆ. ನಂತರ ಎಲೆಕ್ಟ್ರಿಕ್ ಟ್ರಿಮ್ಮರ್‌ನಿಂದ ಟ್ರಿಮ್ ಮಾಡಲು ಪ್ರಾರಂಭಿಸುತ್ತಾರೆ. ಕ್ಷೌರಿಕ ತನ್ನ ಕೆಲಸವನ್ನು ಮಾಡುವಂತೆ ಕೋತಿ ತಾಳ್ಮೆಯಿಂದ ಕುಳಿತುಕೊಂಡಿದೆ. ಅಷ್ಟೇ ಅಲ್ಲ ಮುಖ ಎತ್ತು ಅಂದ್ರೆ ಮುಖವನ್ನೆತ್ತಿ ಟ್ರಿಮ್ ಮಾಡಿಕೊಂಡಿದೆ.

ಈ ಕ್ಯೂಟ್ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಶರ್ಮಾ, ನೀವು ಈಗ ಸ್ಮಾರ್ಟ್ ಆಗಿ ಕಾಣುತ್ತೀರಿ ಎಂದು ಶೀರ್ಷಿಕೆ ನೀಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಆನಂದಿಸಿದ್ದಾರೆ.

— Rupin Sharma IPS (@rupin1992) November 29, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...