alex Certify ರ್ಯಾಂಪ್​ ವಾಕ್​ ಮಾಡುತ್ತಲೇ ಜಾರಿಬಿದ್ದ ಮಾಡೆಲ್​..! ಮುಂದೇನಾಯ್ತು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರ್ಯಾಂಪ್​ ವಾಕ್​ ಮಾಡುತ್ತಲೇ ಜಾರಿಬಿದ್ದ ಮಾಡೆಲ್​..! ಮುಂದೇನಾಯ್ತು ನೋಡಿ

ರ್ಯಾಂಪ್​ ವಾಕ್​​ ಮಾಡುವ ವೇಳೆ ಸಾಕಷ್ಟು ಮಾಡೆಲ್​ಗಳು ಆಯತಪ್ಪಿ ಬಿದ್ದ ವಿಡಿಯೋಗಳು ಇಂಟರ್ನೆಟ್​​ನಲ್ಲಿ ಹರಿದಾಡುತ್ತಲೇ ಇರುತ್ತದೆ. ಆದರೆ ಈ ರೀತಿ ಮುಜುಗರಕ್ಕೆ ಒಳಗಾದ ಬಳಿಕವೂ ಮಾಡೆಲ್​ಗಳು ಹೇಗೆ ಅದನ್ನು ಸ್ವೀಕರಿಸುತ್ತಾರೆ ಅನ್ನೋದು ಮುಖ್ಯವಾದ ವಿಷಯ.

ಇದೇ ರೀತಿಯ ಒಂದು ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಮಧುವಣಗಿತ್ತಿಯಂತೆ ತಯಾರಾಗಿದ್ದ ಮಾಡೆಲ್​ ಒಬ್ಬಾಕೆ ಫ್ಯಾಶನ್​ ಶೋ ವೇಳೆ ಆಯತಪ್ಪಿ ಬಿದ್ದಿದ್ದಾರೆ.

‘ಒನ್ ಮ್ಯಾನ್ ಆರ್ಕೆಸ್ಟ್ರಾ’ ಖ್ಯಾತಿಯ ಸಾಂಟಿಯಾಗೊ ವಿಡಿಯೊ ಭಾರಿ ವೈರಲ್

ವಿಡಿಯೋದಲ್ಲಿ ಮಾಡೆಲ್​​ಗಳ ಗುಂಪು ಮಧುವಣಗಿತ್ತಿಯಂತೆ ತಯಾರಾಗಿತ್ತು. ಅತೀ ಸುಂದರವಾದ ಲೆಹೆಂಗಾ ಹಾಗೂ ಅತ್ಯಾಕರ್ಷಕ ಆಭರಣಗಳನ್ನು ಧರಿಸಿದ್ದರು. ಒಬ್ಬರಾದ ಮೇಲೆ ಒಬ್ಬರಂತೆ ಸರದಿ ಸಾಲಿನಲ್ಲಿ ರ್ಯಾಂಪ್​ ಮೇಲೆ ಹೆಜ್ಜೆ ಹಾಕುತ್ತಿದ್ದ ವೇಳೆ ಓರ್ವ ಮಾಡೆಲ್​ ರ್ಯಾಂಪ್​ನಲ್ಲಿ ಆಯತಪ್ಪಿದ್ದಾರೆ.

ಬೀಳುವ ಭರದಲ್ಲಿ ಈಕೆ ತಮ್ಮ ಮುಂದಿದ್ದ ಮತ್ತೊಬ್ಬ ಮಾಡೆಲ್​ ತಲೆಯ ಮೇಲಿದ್ದ ದುಪ್ಪಟ್ಟಾವನ್ನೂ ಎಳೆದಿದ್ದಾರೆ. ಈಕೆಯ ಹಿಂದಿದ್ದ ಮಾಡೆಲ್​ ಆಕೆಯನ್ನು ಮೇಲೆತ್ತಲು ನೆರವಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...