alex Certify ಅಪಾಯಕಾರಿ ಮೀನನ್ನು ಬರಿಗೈಯಲ್ಲಿ ಮುಟ್ಟಿ ಕಣ್ಣೀರಿಟ್ಟ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಾಯಕಾರಿ ಮೀನನ್ನು ಬರಿಗೈಯಲ್ಲಿ ಮುಟ್ಟಿ ಕಣ್ಣೀರಿಟ್ಟ ವ್ಯಕ್ತಿ

ಪಫರ್​ ಫಿಶ್​ ಅಥವಾ ಬ್ಲೋಫಿಶ್​ ಅತ್ಯಂತ ಅಪಾಯಕಾರಿ ಮತ್ತು ಮಾರಣಾಂತಿಕ ಮೀನುಗಳಲ್ಲಿ ಒಂದು. ಅವು ಕುಟುಕುವುದಿಲ್ಲ ಅಥವಾ ಕಚ್ಚುವುದೂ ಇಲ್ಲ. ಹಲವಾರು ರಕ್ಷಣಾ ಕಾರ್ಯವಿಧಾನಗಳನ್ನು ಅವು ಹೊಂದಿದ್ದು, ಅವು ವಿಷಕಾರಿಯಾಗಿರುವುದರಿಂದ ಪ್ರಾಣಿಗಳು ಮತ್ತು ಮನುಷ್ಯರಿಗೂ ಸಹ ಅಪಾಯ.

ಈ ಅಪಾಯದ ಹೊರತಾಗಿಯೂ ದಕ್ಷಿಣ ಕೊರಿಯಾ, ಚೀನಾ ಮತ್ತು ಜಪಾನ್​ನಂತಹ ದೇಶಗಳು ಪಫರ್​ ಮೀನುಗಳನ್ನು ಅಡುಗೆ ಮನೆಯ ಸವಿಯಾದ ಪದಾರ್ಥವೆಂದು ಪರಿಗಣಿತವಾಗಿದೆ. ವಿಶೇಷವಾಗಿ ತರಬೇತಿ ಪಡೆದ ಬಾಣಸಿಗರಿಗೆ ಮಾತ್ರ ಅವುಗಳನ್ನು ಸುರಕ್ಷಿತವಾಗಿ ಬಳಕೆ ಮಾಡಬೇಕೆಂಬುದು ತಿಳಿದಿದೆ.

ಪಫರ್​ಫಿಶ್​ ಮುಳ್ಳುಗಳಿಂದ ಮುಚ್ಚಿಕೊಂಡಿರುತ್ತದೆ, ಆ ಮುಳ್ಳು ಮಾರಣಾಂತಿಕ ವಿಷದೊಂದಿಗೆ ಹಾನಿ ಮಾಡುತ್ತದೆ. ಈ ಕಾರಣಕ್ಕಾಗಿ, ಕೈಯಿಂದ ಪಫರ್​ ಫಿಶ್​ ಸ್ಪರ್ಶಿಸುವುದು ಸುರಕ್ಷಿತವಲ್ಲ. ಇದನ್ನು ತಿಳಿದಿದ್ದರೂ, ಒಬ್ಬ ವ್ಯಕ್ತಿಯು ಪಫರ್​ ಫಿಶ್​ನೊಂದಿಗೆ ಆಟವಾಡಲು ಹೋಗಿ ಕಣ್ಣೀರು ಹಾಕಿದ್ದಾನೆ.

ಈ ವಿಡಿಯೋವನ್ನು ವೈಲ್ಡ್​ಲೈಫ್​ ಅನಿಮಲ್​ ಎಂಬ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದು 157ಕೆ ವೀಕ್ಷಣೆಯಾಗಿದ್ದು, ಸಾವಿರಾರು ಮಂದಿ ಲೈಕ್​ ಮಾಡಿದ್ದಾರೆ.

ಒಬ್ಬ ವ್ಯಕ್ತಿಯು ನೀರಿನಿಂದ ತೆಗೆದ ಪಫರ್​ಫಿಶ್​ ಅನ್ನು ಚುಚ್ಚುತ್ತಿರುವುದನ್ನು ಕಾಣಬಹುದು. ಮನುಷ್ಯ ಅದರೊಂದಿಗೆ ಆಟವಾಡುತ್ತಿದ್ದಾಗ ಮೀನು ಇನ್ನೂ ಜೀವಂತವಾಗಿತ್ತು ಮತ್ತು ಅದರ ಒಂದು ಮುಳ್ಳು ಅವನ ಬೆರಳಿಗೆ ಸಿಕ್ಕಿಕೊಂಡಿತು. ನಂತರ ಆ ವ್ಯಕ್ತಿ ಮೀನಿನಿಂದ ತನ್ನ ಕೈಯನ್ನು ಬಿಡಿಸಿಕೊಳ್ಳುವಾಗ ಕಿರುಚುತ್ತಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...