alex Certify ಕೈಯಲ್ಲಿ ಹಿಡಿದುಕೊಂಡ ಬೃಹತ್​ ಆನಕೊಂಡಾ ಮೈಯೆಲ್ಲಾ ಕಚ್ಚಿದ ಬೃಹತ್​ ಹಾವು-ಮುಂದೇನಾಯ್ತು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಯಲ್ಲಿ ಹಿಡಿದುಕೊಂಡ ಬೃಹತ್​ ಆನಕೊಂಡಾ ಮೈಯೆಲ್ಲಾ ಕಚ್ಚಿದ ಬೃಹತ್​ ಹಾವು-ಮುಂದೇನಾಯ್ತು ನೋಡಿ

ಬ್ರೆಜಿಲ್: ಆನಕೊಂಡ ಹಾವುಗಳು ಜನರನ್ನು ಸುತ್ತಿಕೊಂಡು ಉಸಿರುಗಟ್ಟಿಸಿ ಸಾಯಿಸುತ್ತವೆಯೇ ವಿನಾ ಅವುಗಳು ವಿಷಕಾರಿಯಲ್ಲ. ಹಾಗೆಂದು ಅದನ್ನು ಹಿಡಿದುಕೊಂಡಾಗ ಬುಸುಗುಟ್ಟಿದರೆ ಬೆಚ್ಚಿಬೀಳುವುದು ಗ್ಯಾರಂಟಿ. ವ್ಯಕ್ತಿಯೊಬ್ಬ ಬೃಹದಾಕಾರದ ಆನಕೊಂಡವನ್ನು ಹಿಡಿದುಕೊಂಡು ಅದರಲ್ಲಿ ಹಲವು ಬಾರಿ ಕಚ್ಚಿಸಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.

ಬ್ರೆಜಿಲ್​ನ ಅಮೆಜಾನ್​ ಕಾಡಿನಿಂದ ತಂದ ಆನಕೊಂಡಾವೊಂದನ್ನು ಹಿಡಿದುಕೊಂಡಿರುವ ವ್ಯಕ್ತಿ ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾನೆ. ತನ್ನನ್ನು ಪ್ರಾಣಿ ಮತ್ತು ಸರೀಸೃಪ ವ್ಯಸನಿ ಎಂದು ಕರೆದುಕೊಳ್ಳುವ ‘ನಿಕ್‌ಥ್ರಾಂಗ್ಲರ್’ ಈ ಕ್ಲಿಪ್ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾನೆ. “ನಾಟಿ ಅನಕೊಂಡಾದ ಜತೆ ನಾನು” ಎಂದು ನಿಕ್ ಶೀರ್ಷಿಕೆಯಲ್ಲಿ ಆತ ಹೇಳಿಕೊಂಡಿದ್ದಾನೆ.

ಈ ವಿಡಿಯೊದಲ್ಲಿ ನಿಕ್​ ತನ್ನ ಎರಡೂ ತೋಳುಗಳಲ್ಲಿ ಉದ್ರೇಕಗೊಂಡ ಆನಕೊಂಡವನ್ನು ಎತ್ತುಕೊಂಡಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ, ಹಾವು ಈತನ ಹೊಟ್ಟೆ ಮತ್ತು ತೋಳಿನ ಮೇಲೆ ಕಚ್ಚಲು ಪ್ರಾರಂಭಿಸುತ್ತದೆ. ದೊಡ್ಡ ಹಾವು ಕಚ್ಚಿದಾಗ ಅವನು ಕೂಗುತ್ತಾನೆ, ಆದರೆ ಅದು ವಿಷಕಾರಿಯಲ್ಲ ಎಂದು ವೀಕ್ಷಕರಿಗೆ ಹೇಳುತ್ತಾನೆ. ಈ ರೀಲ್ಸ್​ ಇದಾಗಲೇ 44 ಮಿಲಿಯನ್ ವೀಕ್ಷಣೆಗಳನ್ನು ಮತ್ತು 4.61 ಲಕ್ಷ ಲೈಕ್ಸ್​ಗಳನ್ನು ಗಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...