alex Certify ಲಕ್ಷಕ್ಕೂ ಆಧಿಕ ಲೈಕ್ಸ್‌ ಗಿಟ್ಟಿಸಿದೆ ಸ್ನೇಹಿತನಿಗೆ ಹೆದರಿಸಿದ ವ್ಯಕ್ತಿಯ ತಮಾಷೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಷಕ್ಕೂ ಆಧಿಕ ಲೈಕ್ಸ್‌ ಗಿಟ್ಟಿಸಿದೆ ಸ್ನೇಹಿತನಿಗೆ ಹೆದರಿಸಿದ ವ್ಯಕ್ತಿಯ ತಮಾಷೆ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ತಮಾಷೆಯ ವಿಡಿಯೋಗಳು ವೈರಲ್ ಆಗುತ್ತವೆ. ಸ್ನೇಹಿತರಿಂದ ಹಿಡಿದು ವಧು-ವರರು ತಮ್ಮ ಚೇಷ್ಟೆಯಿಂದ ಕಂಗೆಟ್ಟು ಹೋಗುವುದನ್ನು ವಿಡಿಯೋದಲ್ಲಿ ನೋಡಿರುತ್ತೇವೆ. ಇದೀಗ ವ್ಯಕ್ತಿಯೊಬ್ಬ ಸ್ನೇಹಿತನನ್ನು ಹೆದರಿಸಿದ ಪರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯೂಟ್ಯೂಬ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಒಂದು ಕೋಣೆಯಲ್ಲಿ ಬಿಳಿ ಬಣ್ಣದ ಮನುಷ್ಯಾಕೃತಿಗಳನ್ನು ಇಡಲಾಗಿತ್ತು. ವ್ಯಕ್ತಿಯೊಬ್ಬ ಮನುಷ್ಯಾಕೃತಿಯಂತೆ ವೇಷ ಧರಿಸಿ, ಅಲ್ಲಿದ್ದ ಆಕೃತಿಗಳ ಜೊತೆ ನಿರ್ಜೀವ ದೇಹದ ರೂಪದಂತೆ ಮಲಗಿದ್ದಾನೆ.

ಮುಂದಿನ ಆದೇಶದವರೆಗೆ ಶಾಲೆ, ಕಾಲೇಜ್ ಬಂದ್ ಮಾಡಲು ತುರ್ತುಸಭೆಯಲ್ಲಿ ನಿರ್ಧಾರ: ದೆಹಲಿ ವಾಯುಮಾಲಿನ್ಯ ತಡೆಗೆ ಮಹತ್ವದ ಕ್ರಮ

ಈ ವೇಳೆ ಕೋಣೆಗೆ ಬಂದ ಆತನ ಸ್ನೇಹಿತ ಪಾಲ್ ವುಡ್ ಆಕೃತಿಗಳನ್ನು ಅಲ್ಲಿಂದ ಶಿಫ್ಟ್ ಮಾಡಲು ಮುಂದಾಗಿದ್ದಾನೆ. ಮನುಷ್ಯಾಕೃತಿ ಎಂದು ವುಡ್ ಎತ್ತಲು ಹೋದಾಗ ಹೋ….. ಎಂದು ಆಕೃತಿಯಂತೆ ವೇಷ ಧರಿಸಿದ್ದ ಕ್ಲೇನ್ ಕಿರುಚಿದ್ದಾನೆ. ಇದರಿಂದ ಹೆದರಿದ ಪಾಲ್ ವುಡ್ ಅಲ್ಲೇ ಕೆಳಗೆ ಕುಸಿದು ಬಿದ್ದಿದ್ದಾನೆ. ಬಳಿಕ ಆತನಿಗೆ ಮನುಷ್ಯಾಕೃತಿ ವೇಷದಲ್ಲಿ ಕ್ಲೇನ್ ಇರುವುದು ಗೊತ್ತಾಗಿದೆ. ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 3.17 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...