alex Certify ಗಗನಸಖಿಗೆ ಅದ್ಭುತ ಗಿಫ್ಟ್​ ಕೊಟ್ಟ ಪ್ರಯಾಣಿಕ: ಪುಳಕಿತಳಾದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಗನಸಖಿಗೆ ಅದ್ಭುತ ಗಿಫ್ಟ್​ ಕೊಟ್ಟ ಪ್ರಯಾಣಿಕ: ಪುಳಕಿತಳಾದ ಯುವತಿ

 

ಪ್ರಯಾಣಿಕರು ವಿಮಾನಯಾನ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮತ್ತು ಅಗೌರವ ತೋರಿದ ಹಲವಾರು ನಿದರ್ಶನಗಳಿವೆ. ಆದರೆ ಇಲ್ಲೊಂದು ವಿಭಿನ್ನ ಘಟನೆಯಾಗಿದೆ. ಈ ಘಟನೆಯಿಂದಾಗಿ ಗಗನಸಖಿಯೊಬ್ಬರು ತಾವು ಕನಸಿನಲ್ಲಿಯೂ ಊಹಿಸಿರದ ಗಿಫ್ಟ್​ ಒಂದನ್ನು ಪ್ರಯಾಣಿಕರೊಬ್ಬರಿಂದ ಪಡೆದುಕೊಂಡಿದ್ದಾಳೆ.

ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಗಗನಸಖಿಯೊಬ್ಬಳ ರೇಖಾಚಿತ್ರವನ್ನು ಚಿತ್ರಿಸಿ ಆಕೆಗೆ ನೀಡಿದ್ದಾರೆ. ಇದೇನು ದೊಡ್ಡ ವಿಷಯ ಅಲ್ಲ ಎಂದು ತೋರಿದರೂ ಈ ಚಿತ್ರವನ್ನು ನೋಡಿ ಆಕೆ ಪುಳಕಿತಳಾಗಿ ಆನಂದಬಾಷ್ಪ ಹರಿಸಿದ ಕ್ಷಣ ಮಾತ್ರ ನೋಡುಗರನ್ನು ಭಾವುಕರನ್ನಾಗಿಸುತ್ತದೆ.

ರೆಡ್ಡಿಟ್‌ನಲ್ಲಿ 50 ಸೆಕೆಂಡ್‌ಗಳ ಈ ವಿಡಿಯೋ ಶೇರ್​ ಮಾಡಲಾಗಿದೆ. ಗಗನಸಖಿಯೊಬ್ಬಳು ಪ್ರಯಾಣಿಕರಿಗೆ ಆಹಾರ ಸರಬರಾಜು ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಾಸ್ಕ್​ ಧರಿಸಿ ಆಕೆ ಆಹಾರ ನೀಡುತ್ತಿರುವ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಪ್ರಯಾಣಿಕರೊಬ್ಬರು ಆಕೆಯ ರೇಖಾಚಿತ್ರವನ್ನು ಚಿತ್ರಿಸಿದ್ದಾರೆ.

ನಂತರ ಆಕೆ ಇದ್ದಲ್ಲಿಗೆ ಹೋಗಿ ಆ ರೇಖಾಚಿತ್ರ ಕೊಟ್ಟಿದ್ದಾರೆ. ಇದೇನೆಂದು ತಿಳಿಯದ ಗಗನಸಖಿ ರೇಖಾಚಿತ್ರ ನೋಡಿದಾಗ ಚಕಿತ, ಅಚ್ಚರಿ, ಸಂತೋಷ ಎಲ್ಲವೂ ಒಟ್ಟಿಗೇ ಆಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದನ್ನು ತಾನೇ ಇಟ್ಟುಕೊಳ್ಳಬಹುದು ಎಂದು ಕೇಳಿ ಆಕೆ ಖುಷಿಯಿಂದ ಅದನ್ನು ಪಡೆದುಕೊಂಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...