alex Certify ಈತ ಮರ ಇಳಿಯುವ ಶೈಲಿ ನೋಡಿದ್ರೆ ಶಾಕ್‌ ಆಗುತ್ತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈತ ಮರ ಇಳಿಯುವ ಶೈಲಿ ನೋಡಿದ್ರೆ ಶಾಕ್‌ ಆಗುತ್ತೆ….!

ನಟ ಹೃತಿಕ್​ ರೋಷನ್​ ನಟಿಸಿದ ಕ್ರಿಶ್​ ಚಲನಚಿತ್ರದಲ್ಲಿ ಮರ ಹತ್ತುವ ದೃಶ್ಯ ಇಂದಿಗೂ ಜನಪ್ರಿಯ. ಚಲನಚಿತ್ರವು ಬಿಡುಗಡೆಯಾದಾಗಿನಿಂದ ಅನೇಕರು ಆ ಸಾಹಸ ದೃಶ್ಯ ಮರುಸೃಷ್ಟಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ.

ಈಗ, ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ನಿಜವಾದ- ಕ್ರಿಶ್​ ಶೈಲಿಯಲ್ಲಿ ಮರ ಇಳಿಯುತ್ತಿರುವುದನ್ನು ತೋರಿಸುವ ವಿಡಿಯೊ ಕಾಣಿಸಿಕೊಂಡಿದೆ. ಆ ಸಾಹಸಿ ತನ್ನ ಬರಿಗೈಯಿಂದ ಮರವನ್ನು ಹತ್ತುತ್ತಾನೆ. ಸಲೀಸಾಗಿ ಕೊಂಬೆಗಳಿಗೆ ನೇತಾಡುತ್ತಾ ಕೆಳಗಿಳಿಯುತ್ತಾನೆ. “ಬಾಹುಬಲಿ” ಎಂಬ ಶೀರ್ಷಿಕೆಯೊಂದಿಗೆ ಘಂಟಾ ಎಂಬ ಇನ್​ಸ್ಟಾಗ್ರಾಮ್​ ಪುಟವು ವಿಡಿಯೊವನ್ನು ಹಂಚಿಕೊಂಡಿದೆ.

ಅನೇಕ ನೆಟ್ಟಿಗರು ಶೀರ್ಷಿಕೆ ಸರಿಪಡಿಸಿದ್ದಾರೆ, ಈ ಸಾಹಸವು ಕ್ರಿಶ್​ ಅನ್ನು ಹೋಲುತ್ತದೆ, ಬಾಹುಬಲಿ ಅಲ್ಲ ಎಂದು ಹೇಳಿದ್ದಾರೆ. ವಿಡಿಯೋ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರನ್ನು ರಂಜಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...