alex Certify ‘ಜಾನೆ ಕಹಾನ್ ಮೇರಾ ಜಿಗರ್ ಗಯಾ ಜಿ…..’ ಕ್ಲಾಸಿಕ್ ಹಾಡಿಗೆ ಪುಟ್ಟ ಮಕ್ಕಳ ಅದ್ಭುತ ಡ್ಯಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜಾನೆ ಕಹಾನ್ ಮೇರಾ ಜಿಗರ್ ಗಯಾ ಜಿ…..’ ಕ್ಲಾಸಿಕ್ ಹಾಡಿಗೆ ಪುಟ್ಟ ಮಕ್ಕಳ ಅದ್ಭುತ ಡ್ಯಾನ್ಸ್

ಭಾರತದಲ್ಲಿ ಟಿಕ್‌ಟಾಕ್ ನಿಷೇಧದ ನಂತರ ಇನ್‌ಸ್ಟಾಗ್ರಾಮ್ ರೀಲ್‌ಗಳು ಟ್ರೆಂಡ್ ಆಗಿವೆ.‌ ವಿಶೇಷವಾಗಿ ಇನ್ ಸ್ಟಾಗ್ರಾಮ್ ಮ್ಯೂಸಿಕ್ ಬಂದ ನಂತರ ಇನ್ ಸ್ಟಾ ಬಳಕೆದಾರರು ಯಾವುದೇ ಜನಪ್ರಿಯ ಹಾಡಿನ ಆಡಿಯೊವನ್ನು ಬಳಸಿ ಡ್ಯಾನ್ಸ್ ರೀಲ್‌ ಮಾಡುತ್ತಿದ್ದು ಅದರ ಸಂಖ್ಯೆಯು ತೀವ್ರವಾಗಿ ಹೆಚ್ಚಾಗಿದೆ.

ಮಕ್ಕಳ ಡ್ಯಾನ್ಸ್ ವಿಡಿಯೋಗಳಂತೂ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಹಿಟ್ ಆಗುತ್ತವೆ, ಸಾಕಷ್ಟು ವೀಕ್ಷಣೆಗಳನ್ನು ಗಳಿಸುತ್ತವೆ.

ಈಗ ಇಬ್ಬರು ಹುಡುಗಿಯರು ಶಾಲಾ ಸಮವಸ್ತ್ರವನ್ನು ಧರಿಸಿ ಬಾಲಿವುಡ್ ಕ್ಲಾಸಿಕ್ ಹಾಡಿಗೆ ನೃತ್ಯ ಮಾಡುತ್ತಿರುವ ವೀಡಿಯೊ ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿ ವೈರಲ್ ಆಗುತ್ತಿದೆ.

ಹೈದರಾಬಾದ್‌ನಲ್ಲಿ ವಾಸಿಸುತ್ತಿರುವ ಈ‌ ಮಕ್ಕಳ ತಂದೆ ರಮೇಶ್ ಭಂಡಾರಿ ಚೆಟ್ರಿ ವಿಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು 3.3 ಮಿಲಿಯನ್ ವೀಕ್ಷಣೆಗಳನ್ನು ಮತ್ತು 226ಕೆ ಲೈಕ್‌ ಪಡೆದುಕೊಂಡಿದೆ.

ಗುರು ದತ್ ಮತ್ತು ಮಧುಬಾಲಾ ಅಭಿನಯದ 1955 ರ ‘ಮಿಸ್ಟರ್ ಅಂಡ್ ಮಿಸೆಸ್ ’ ಚಿತ್ರದ “ಜಾನೆ ಕಹಾನ್ ಮೇರಾ ಜಿಗರ್ ಗಯಾ ಜಿ” ಹಾಡಿಗೆ ಚಿಕ್ಕ ಹುಡುಗಿಯರು ಕುಣಿಯುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು.

ಕ್ಲಾಸಿಕ್ ಹಿಟ್ ಅನ್ನು ಗೀತಾ ದತ್ ಮತ್ತು ಮೊಹಮ್ಮದ್ ರಫಿ ಹಾಡಿದ್ದಾರೆ. ಭಂಡಾರಿ ಸಹೋದರಿಯರ ತಮಾಷೆಯ ಅಭಿವ್ಯಕ್ತಿ ಮತ್ತು ಉತ್ಸಾಹಭರಿತ ನೃತ್ಯದ ಸ್ಟೆಪ್ಸ್ ಅನೇಕ ನೆಟ್ಟಿಗರ ಮುಖದಲ್ಲಿ ನಗುವನ್ನು ಮೂಡಿಸುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...