alex Certify ಐಸ್​ ಕ್ರೀಂ ಕೊಡಲು ವಿಳಂಬ ಮಾಡಿದ್ದಕ್ಕೆ ಬಾಲಕಿಗೆ ಕೆಂಡದಂಥ ಕೋಪ…! ಕ್ಯೂಟ್‌ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಸ್​ ಕ್ರೀಂ ಕೊಡಲು ವಿಳಂಬ ಮಾಡಿದ್ದಕ್ಕೆ ಬಾಲಕಿಗೆ ಕೆಂಡದಂಥ ಕೋಪ…! ಕ್ಯೂಟ್‌ ವಿಡಿಯೋ ವೈರಲ್

ಚಿಕ್ಕಮಕ್ಕಳನ್ನು ಕಂಡಾಗ ತಮಾಷೆಗೆ ರೀತಿಯಲ್ಲಿ ಅವರನ್ನು ರೇಗಿಸುವುದು ಸಹಜ. ಅವರ ಕೈಯಲ್ಲಿದ್ದ ವಸ್ತು ತೆಗೆದುಕೊಳ್ಳುವುದು, ಇಲ್ಲದೇ ಹೋದರೆ ಅವರಿಗೆ ಏನಾದರೂ ಕೊಡುವ ಹಾಗೆ ಮಾಡಿ ಮಕ್ಕಳು ತೆಗೆದುಕೊಳ್ಳಲು ಬಂದಾಗ ಮೇಲಕ್ಕೆ ಹಾರಿಸುವುದು…… ಹೀಗೆ ಅನೇಕ ರೀತಿಯ ಹಾಸ್ಯಗಳನ್ನು ಮಾಡುತ್ತಿರುತ್ತಾರೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ.

ಪುಟ್ಟ ಬಾಲಕಿ ಟರ್ಕಿಶ್ ಐಸ್ ಕ್ರೀಮ್ ಕೊಳ್ಳಲು ಬಂದಾಗ ಅವಳಿಗೆ ಅದನ್ನು ಕೊಡದೇ ರೇಗಿಸುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಬಾಲಕಿಯೊಬ್ಬಳು ಐಸ್​ಕ್ರೀಂ ನೀಡುವಂತೆ ಅಂಗಡಿಯವನಿಗೆ ಕೇಳುತ್ತಾಳೆ. ಅಂಗಡಿಯಾತ ಟರ್ಕಿಶ್​ ಐಸ್​ಕ್ರೀಂ ಕೋನ್​ ಅನ್ನು ಆಕೆಗೆ ನೀಡುತ್ತಾನೆ. ಅದರ ಇನ್ನೊಂದು ತುದಿಯಲ್ಲಿ​ ನ್ಯಾಪ್​ಕೀನ್​ ಇರುತ್ತದೆ.

ಅಂಗಡಿಯಾತ ಐಸ್​ಕ್ರೀಂ ನೀಡಿದಂತೆ ಮಾಡಿ ಅದನ್ನು ತನ್ನ ಕೈಯಲ್ಲೇ ಇಟ್ಟುಕೊಂಡು ಬಾಲಕಿಗೆ ನ್ಯಾಪ್​ಕೀನ್​ ನೀಡುತ್ತಾನೆ. ಅವನು ಏನು ಮಾಡುತ್ತಿದ್ದಾನೆ ಎಂದು ಬಾಲಕಿಗೆ ಅರ್ಥವಾಗದೇ ಕಣ್​ ಕಣ್​ಬಿಡುತ್ತಾಳೆ. ಕೊನೆಗೆ ಅಂಗಡಿಯಾತ ಅವಳಿಗೆ ಐಸ್​ಕ್ರೀಂ ನೀಡುತ್ತಾನೆ.

ಈ ತಮಾಷೆಯ ವಿಡಿಯೋಗೆ ಥಹರೇವಾರಿ ಕಮೆಂಟ್ಸ್​ಗಳು ಬಂದಿವೆ. ದಿನನಿತ್ಯವೂ ಇಂಥ ಹಲವಾರು ಘಟನೆಗಳು ಮಕ್ಕಳ ಜತೆ ನಡೆಯುತ್ತಲೇ ಇರುತ್ತವೆ. ಕೆಲವೊಂದು ಮಾತ್ರ ಹೀಗೆ ವೈರಲ್ ಆಗುತ್ತವೆ ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...