alex Certify ನೋರಾ ಫತೇಹಿಯ ‘ಕುಸು ಕುಸು’ವನ್ನು ಮರುಸೃಷ್ಟಿಸಿದ ಪುಟ್ಟ ಬಾಲಕಿ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋರಾ ಫತೇಹಿಯ ‘ಕುಸು ಕುಸು’ವನ್ನು ಮರುಸೃಷ್ಟಿಸಿದ ಪುಟ್ಟ ಬಾಲಕಿ: ವಿಡಿಯೋ ವೈರಲ್

ಡ್ಯಾನ್ಸ್ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ..? ಸಾಮಾಜಿಕ ಜಾಲತಾಣದಲ್ಲಂತೂ ಪ್ರತಿನಿತ್ಯ ಸಾಕಷ್ಟು ನೃತ್ಯದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ ಇದೀಗ ಪುಟ್ಟ ಬಾಲಕಿ ಮಾಡಿರುವ ನೃತ್ಯ ನಿಮ್ಮ ಹೃದಯ ಗೆಲ್ಲುವುದರಲ್ಲಿ ಸಂಶಯವೇ ಇಲ್ಲ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಪ್ರತಿಭಾವಂತ ಬಾಲಕಿಯನ್ನು ತಾನಿಯಾ ಎಂದು ಗುರುತಿಸಲಾಗಿದೆ. ಸತ್ಯಮೇವ ಜಯತೆ-2 ಸಿನಿಮಾದ ಕುಸು ಕುಸು ಹಾಡಿನ ನೋರಾ ಫತೇಹಿಯ ನೃತ್ಯದ ಚಲನೆಯನ್ನು ಈಕೆ ಮರುಸೃಷ್ಟಿಸಿದ್ದಾಳೆ. ತಾನಿಯಾ ಗೋಲ್ಡನ್ ಬಣ್ಣದ ಬಟ್ಟೆಯನ್ನು ಧರಿಸಿ, ಹಿಂದೆ ಟಿವಿಯಲ್ಲಿ ಹಾಡಿನ ವಿಡಿಯೋ ಪ್ಲೇ ಆಗುತ್ತಿದ್ರೆ, ಅದಕ್ಕೆ ತಕ್ಕಹಾಗೆ ತಾನಿಯಾ ಸೊಂಟ ಬಳುಕಿಸಿದ್ದಾಳೆ.

ಬಾಲಕಿಯ ಅದ್ಭುತ ನೃತ್ಯ ಪ್ರದರ್ಶನದ ವಿಡಿಯೋ ನೆಟ್ಟಿಗರನ್ನು ಬೆರಗುಗೊಳಿಸಿದೆ. ಅನೇಕರು ಬಾಲಕಿಯ ಮೇಲೆ ಪ್ರೀತಿಯ ಸುರಿಮಳೆಗೈದಿದ್ದಾರೆ. ಅಲ್ಲದೆ ಈಕೆ ಅದ್ಭುತ ಪ್ರತಿಭೆ ಹೊಂದಿದ್ದಾಳೆ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಲ್ಲಿಯವರೆಗೆ 4500 ಕ್ಕೂ ಹೆಚ್ಚು ಜನರು ವಿಡಿಯೋಗೆ ಲೈಕ್ಸ್ ಮಾಡಿದ್ದಾರೆ. ತಾನಿಯಾ ಮತ್ತು ಆಕೆಯ ತಾಯಿ ಸೋನಿ ಇಬ್ಬರೂ ಇನ್ಸ್ಟಾಗ್ರಾಂನಲ್ಲಿ ಒಟ್ಟು 77.6 K ಅನುಯಾಯಿಗಳನ್ನು ಹೊಂದಿದ್ದಾರೆ. ಇಬ್ಬರೂ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಆಗಾಗ್ಗೆ ತಮ್ಮ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...