alex Certify ಪಕೋಡಾ ಮಾಡುತ್ತಾ ಮಗನಿಗೆ ಹಿಂದಿ ಕಲಿಸಿದ ಕೊರಿಯನ್​ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಕೋಡಾ ಮಾಡುತ್ತಾ ಮಗನಿಗೆ ಹಿಂದಿ ಕಲಿಸಿದ ಕೊರಿಯನ್​ ಮಹಿಳೆ…!

ಇದು ಹಿಂದಿ ಹೇರಿಕೆ ವಿಷಯವಲ್ಲ, ಬದಲಿಗೆ ಅನ್ಯ ದೇಶದ ತಾಯಿಯೊಬ್ಬಳು ತನ್ನ ಮಗನಿಗೆ ಹಿಂದಿ ಹೇಳಿಕೊಟ್ಟು ಸುದ್ದಿಯಾಗಿರುವ ವಿಚಾರ.

ಕೊರಿಯಾದ ತಾಯಿ- ಮಗ ಜೋಡಿ ದೇಸಿ ನೆಟ್ಟಿಗರ ಹೃದಯ ಗೆಲ್ಲುತ್ತಿದೆ. ತಾಯಿತು ಕೊರಿಯನ್​ ಮಹಿಳೆಯಾಗಿದ್ದು, ಅವರು ಭಾರತೀಯ ವ್ಯಕ್ತಿಯ ಪತ್ನಿ. ತಮ್ಮ ಮಗನೊಂದಿಗೆ ದಕ್ಷಿಣ ಕೊರಿಯಾದಲ್ಲಿ ವಾಸಿಸುತ್ತಿದ್ದಾರೆ.

‘ಪ್ರೇಮ್ ​ಕಿಮ್ ​ಫಾರ್​ ಎವರ್​’ ಎಂಬ ಜಾಲತಾಣದ ಹ್ಯಾಂಡಲ್​ನಲ್ಲಿ ಪೋಸ್ಟ್​ ಮಾಡಿದ ವಿಡಿಯೋದಲ್ಲಿ ಕೊರಿಯನ್​ ಮಹಿಳೆ ಪಕೋಡಾ ತಯಾರಿಸುವುದನ್ನು ಕಾಣಬಹುದು ಮತ್ತು ಹಿಂದಿಯಲ್ಲಿ ಆ ತಿನಿಸಿನ ಹೆಸರನ್ನು ಸರಿಯಾಗಿ ಹೇಳುವುದು ಹೇಗೆ ಎಂದು ತನ್ನ ಮಗನಿಗೆ ಕಲಿಸುತ್ತಿದ್ದದ್ದು ನೋಡಬಹುದಾಗಿದೆ.

ಮೊದಲ ರೀಲ್​ ಮಹಿಳೆ ತನ್ನ ಅಡುಗೆಮನೆಯಲ್ಲಿ ಕೆಲವು ಪಕೋಡಾವನ್ನು ಸಂತೋಷದಿಂದ ಕರಿಯುವುದನ್ನು ತೋರಿಸುತ್ತದೆ. ಅರಿಜಿತ್​ ಸಿಂಗ್​ ಅವರ ಟ್ರೆಂಡಿಂಗ್​ ಹಾಡು ಅಟಕ್​ ಗಯಾ ವಿಡಿಯೊದಲ್ಲಿ ಪ್ಲೇ ಆಗುತ್ತಿದೆ.

ಈ ವಿಡಿಯೋ 1.5 ಮಿಲಿಯನ್​ ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು ದೇಸಿ ನೆಟ್ಟಿಗರು ಖುಷಿಯಿಂದ ಕಾಮೆಂಟ್​ ಮಾಡಿದ್ದಾರೆ. ಮತ್ತೊಂದು ರೀಲ್​ನಲ್ಲಿ, ಕೊರಿಯನ್​ ತಾಯಿಯು ತನ್ನ ಮಗನಿಗೆ ಪಕೋಡಾ ಪದ ಪ್ರಯೋಗ ಹೇಗೆ ಹೇಳಬೇಕೆಂದು ಕಲಿಸುವುದನ್ನು ಕಾಣಬಹುದು.

“ಯೇ ಪಕೋಡಾ ಹೈ (ಇದು ಪಕೋಡಾ)” ಎಂದು ಆ ತಾಯಿ ಚಿಕ್ಕ ಹುಡುಗನಿಗೆ ಕಲಿಸುತ್ತಾಳೆ. ತಾಯಿ -ಮಗ ಇಬ್ಬರು ಒಂದೆರೆಡು ಬಾರಿ ಪುನರುಚ್ಚರಿಸುವುದು ಕೇಳಿಸುತ್ತದೆ. “ಪಕೋಡಾ ಬಹುತ್​ ಸ್ವಾದ್​ ಹೈ (ಪಕೋಡಗಳು ತುಂಬಾ ರುಚಿಕರವಾಗಿವೆ)’ ಎಂದು ಸಹ ಕಲಿಸುತ್ತಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...