ಕೇರಳದ ತಾಮರಸ್ಸೇರಿಯಲ್ಲಿ ಮೈಜುಮ್ಮೆನ್ನುವ ಘಟನೆ ನಡೆದಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನ ಮೇಲೆ ಭಾರೀ ಗಾತ್ರದ ಬಂಡೆ ಗುಡ್ಡದಿಂದ ಉರುಳಿ ಬಿದ್ದು ಆತ ಸಾವನ್ನಪ್ಪಿದ್ದಾನೆ.
ಬೈಕ್ ಹಿಂದೆ ಹೋಗುತ್ತಿದ್ದ ಮತ್ತೋರ್ವ ಬೈಕ್ ಸವಾರ ಈ ಶಾಕಿಂಗ್ ದೃಶ್ಯವನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ.
BIG NEWS: ಆಸಿಡ್ ದಾಳಿ ಪ್ರಕರಣ; ಆರೋಪಿ ಪತ್ತೆಗೆ 7 ತಂಡ ರಚನೆ
ಬೈಕ್ ಸವಾರನ ಮೇಲೆ ಹೆಬ್ಬಂಡೆಯ ಒಂದು ತುಣುಕು ಬಿದ್ದ ಪರಿಣಾಮ ಆತ ಆಯತಪ್ಪಿ ಎಡಬದಿಯಲ್ಲಿರುವ ಕಮರಿಗೆ ಬಿದ್ದಿದ್ದಾನೆ. ಕಲ್ಲು ಬಿದ್ದ ರಭಸದಿಂದ ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಅಸುನೀಗಿದ್ದಾನೆ.
ಆ ಕ್ಷಣವನ್ನು ಮತ್ತೊಬ್ಬ ಸವಾರ ಸೆರೆ ಹಿಡಿದಿರುವ ವಿಡಿಯೋ ನೋಡಿದರೆ ಮೈಜುಮ್ಮೆನ್ನುವಂತಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.