alex Certify ಮತ್ತೊಂದು ಹಾಡಿಗೆ ದನಿಯಾದ ರಾನು ಮಂಡಲ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ಹಾಡಿಗೆ ದನಿಯಾದ ರಾನು ಮಂಡಲ್​….!

ʼಏಕ್​ ಪ್ಯಾರ್​ ಕಾ ನಗ್ಮಾ ಹೈʼ ಹಾಡಿನ ಮೂಲಕ ರಾತ್ರೋ ರಾತ್ರಿ ಹಿಟ್​ ಆಗಿದ್ದ ರಾನು ಮಂಡಲ್​ ನಿಮಗೆಲ್ಲ ನೆನಪಿದ್ದಿರಬಹುದು. ಲತಾ ಮಂಗೇಶ್ಕರ್​ರ ಈ ಹಾಡನ್ನು ರೈಲ್ವೆ ನಿಲ್ದಾಣದಲ್ಲಿ ಹಾಡಿದ್ದ ರಾನು ಬಳಿಕ ಸಿಕ್ಕಾಪಟ್ಟೆ ಫೇಮ್​ ಗಳಿಸಿದ್ದರು. ಇದೀಗ ಇದೇ ರಾನು ಸೋಶಿಯಲ್​ ಮೀಡಿಯಾ ಸೆನ್ಸೇಷನ್​​ ಆಗಿರುವ ಮನಿಕೆ ಮಾಗೆ ಹಿತೆ ಹಾಡನ್ನು ಹಾಡಿದ್ದಾರೆ.

ಯುಟ್ಯೂಬರ್​ ಪರಿಚೊಯ್​​ ಎಂಬವರು ಈ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ. ಇದರಲ್ಲಿ ಕೆಂಪು ಬಣ್ಣದ ಟೀ ಶರ್ಟ್​ ಧರಿಸಿರುವ ರಾನು ಮನಿಕೆ ಮಾಗೆ ಹಿತೆ ಹಾಡನ್ನು ಹಾಡಿದ್ದಾರೆ.

ಮನಿಕೆ ಮಾಗೆ ಹಿತೆ ಎಂಬ ಹಾಡನ್ನು ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕ ಡಿ ಸಿಲ್ವಾ ಎಂಬವರು ಹಾಡಿದ್ದರು. ಇವರ ಕಂಠಸಿರಿಯಲ್ಲಿ ಮೂಡಿಬಂದ ಈ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ ಇದೇ ಹಾಡನ್ನು ಹಾಡುವ ಮೂಲಕ ರಾನು ಮಂಡಲ್​ ಸೋಶಿಯಲ್​ ಮೀಡಿಯಾದಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...