alex Certify Viral Video: ಸಮುದ್ರದಾಳದಲ್ಲಿ ʼತ್ರಿವರ್ಣ ಧ್ವಜʼ ಹಾರಿಸಿದ ಕೋಸ್ಟ್​ ಗಾರ್ಡ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ಸಮುದ್ರದಾಳದಲ್ಲಿ ʼತ್ರಿವರ್ಣ ಧ್ವಜʼ ಹಾರಿಸಿದ ಕೋಸ್ಟ್​ ಗಾರ್ಡ್​

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದದ್ದು, ಈ ವೇಳೆ ʼಹರ್​ ಘರ್​ ತಿರಂಗಾʼ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಭಾರತೀಯ ಕೋಸ್ಟ್​ ಗಾರ್ಡ್​ ಸಮುದ್ರದಲ್ಲಿ ನೀರೊಳಗೆ ಧ್ವಜ ಹಾರಿಸಿದ್ದಾರೆ.

“ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಪ್ರೇರೇಪಿಸುವುದು ಮತ್ತು ಭಾರತೀಯ ರಾಷ್ಟ್ರಧ್ವಜದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯದ ಹಿಂದಿನ ಉದ್ದೇಶ” ಎಂದು ಐಸಿಜಿ ಅಧಿಕಾರಿಗಳು ತಿಳಿಸಿದ್ದಾರೆ.

75ನೇ ಸ್ವಾತಂತ್ರ್ಯದ ದಿನಾಚರಣೆಯನ್ನು ಜನರ ಪಾಲ್ಗೊಳ್ಳುವಿಕೆಯೊಂದಿಗೆ ಆಚರಿಸಲು ಕೇಂದ್ರ ಸರ್ಕಾರ ‘ಹರ್​ ಘರ್​ ತಿರಂಗ’ ಅಭಿಯಾನ ಹಮ್ಮಿಕೊಂಡಿದ್ದು, ಎಲ್ಲರೂ ತಮ್ಮ ಮನೆಗಳ ಮೇಲೆ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲು ಬಯಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಜುಲೈ 22ರಂದು ಹರ್​ ಘರ್​ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದರು.

ಧ್ವಜಗಳ ಉತ್ಪಾದನೆಗೆ ರಾಜ್ಯಗಳು ಸ್ವಸಹಾಯ ಗುಂಪುಗಳನ್ನು ಸಜ್ಜುಗೊಳಿಸಿವೆ ಮತ್ತು ಸ್ಥಳೀಯ ಟೈಲರಿಂಗ್​ ಘಟಕಗಳು ಮತ್ತು ಎಂಎಸ್​ಎಂಇ ಗಳನ್ನು ಸಹ ನಿಯೋಜಿಸಲಾಗಿದೆ. ಜವಳಿ ಸಚಿವಾಲಯವು ದೊಡ್ಡ ಪ್ರಮಾಣದಲ್ಲಿ ಧ್ವಜಗಳನ್ನು ಪೂರೈಸುವ ಧ್ವಜ ಉತ್ಪಾದಕರನ್ನು ಗುರುತಿಸಿದೆ.

ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಚಿವಾಲಯಗಳು ಪೂರ್ಣ ಉತ್ಸಾಹದಿಂದ ಪ್ರಚಾರದಲ್ಲಿ ವ್ಯಾಪಕವಾಗಿ ಭಾಗವಹಿಸುತ್ತಿವೆ. ಈ ಅಭಿಯಾನವು ಆಗಸ್ಟ್​ 13ರಿಂದ 15 ರವರೆಗೆ ದೇಶಾದ್ಯಂತ ಧ್ವಜಗಳನ್ನು ಹಾರಿಸುವ ಗುರಿಯನ್ನು ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...