alex Certify ʼಅಂಕಲ್ʼ​ ಗಳ ಪಾರ್ಟಿಯಲ್ಲಿ ನಾಗಿನ್​ ಡ್ಯಾನ್ಸ್; ಹಿರಿಯರ ಉತ್ಸಾಹ ಮೆಚ್ಚಿಕೊಂಡ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಅಂಕಲ್ʼ​ ಗಳ ಪಾರ್ಟಿಯಲ್ಲಿ ನಾಗಿನ್​ ಡ್ಯಾನ್ಸ್; ಹಿರಿಯರ ಉತ್ಸಾಹ ಮೆಚ್ಚಿಕೊಂಡ ನೆಟ್ಟಿಗರು

ಮನೆಯೊಂದರಲ್ಲಿ 50-60 ಮೇಲ್ಪಟ್ಟ ಅಂಕಲ್​ಗಳೆಲ್ಲ ಒಟ್ಟಿಗೆ ಸೇರಿ ಪಾರ್ಟಿ ಮಾಡಿದ್ದು, ಈ ವೇಳೆ ನಾಗಿನ್​ ಡ್ಯಾನ್ಸ್​ ಮಾಡಿದ್ದಾರೆ. ಅವರೆಲ್ಲ ಮೈಚಳಿ ಬಿಟ್ಟು ಖುಷಿಯಿಂದ ಸ್ಟೆಪ್​ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್​ ಆಗಿದೆ.

ಈ ವಿಡಿಯೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ‘ಜಿಐಇಡಿಡಿಇ’ ಎಂಬ ಹೆಸರಿನ ಪೇಜ್​ ಹಂಚಿಕೊಂಡಿದ್ದು ‘ನಾನು ಮತ್ತು ನನ್ನ ಬೋಯಿಸ್​(ಬಾಯ್ಸ್​) 30 ವರ್ಷಗಳ ನಂತರ’ ಎಂಬ ಶೀರ್ಷಿಕೆ ಇದೆ. ಇದು ಅತೀ ಕಡಿಮೆ ಅವಧಿಯಲ್ಲಿ 40 ಸಾವಿರಕ್ಕಿಂತ ಹೆಚ್ಚು ವೀಕ್ಷಣೆಯಾಗಿದ್ದು, 4 ಸಾವಿರದಷ್ಟು ಲೈಕ್​ ಗಿಟ್ಟಿಸಿದೆ.

ಮನಸ್ಸಿನ ಎಲ್ಲ ಸಂಕಟ ಬದಿಗಿಟ್ಟು ಅಂಕಲ್​ಗಳು ಸಂತೋಷದಿಂದ ಕುಣಿಯುತ್ತಿರುವುದು ಕಾಣಬಹುದಾಗಿದೆ. ಕೆಲವರು ಬದಿಯಲ್ಲಿ ನಿಂತು ಚಪ್ಪಾಳೆ ತಟ್ಟುತ್ತಾರೆ, ಮತ್ತಿಬ್ಬರು ಕುಳಿತು ವೀಕ್ಷಿಸುತ್ತಿದ್ದಾರೆ.

ಒಬ್ಬ ವ್ಯಕ್ತಿಯು ಪುಂಗಿ ವಾದ್ಯ ನುಡಿಸುವಂತೆ ಸ್ಟೆಪ್​ ಹಾಕಿದರೆ ಮತ್ತೊಬ್ಬರು ಹಾವಿನಂತೆ ವರ್ತಿಸುತ್ತಾರೆ. ಇತರ ಸ್ನೇಹಿತರು ಇವರಿಬ್ಬರನ್ನು ನೋಡಿ ಹಾವು ಹೆಡೆ ಎತ್ತಿದಂತೆ ಕೈಯಲ್ಲಿ ತೋರಿಸಿ ಹೆಜ್ಜೆ ಹಾಕುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಅನೇಕರು ಈ ವಿಡಿಯೋವನ್ನು ಶೇರ್​ ಮಾಡಿ ನಮ್ಮ ಹಿಂದಿನ ನೆನಪುಗಳನ್ನು ಮಾಡಿಕೊಂಡಿದ್ದಾರೆ. ಮತ್ತೆ ಕೆಲವರು ಹಾಸ್ಯಮಯ ಕಾಮೆಂಟ್​ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...