alex Certify ಮಂತ್ರಮುಗ್ಧಗೊಳಿಸುತ್ತೆ ಈ ಮೂವರು ಯುವಕರ ಅದ್ಭುತ ನೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂತ್ರಮುಗ್ಧಗೊಳಿಸುತ್ತೆ ಈ ಮೂವರು ಯುವಕರ ಅದ್ಭುತ ನೃತ್ಯ

ಕಲೆಗೆ ಈಗ ಸಾಮಾಜಿಕ ಜಾಲತಾಣವೂ ಒಂದು ವೇದಿಕೆ. ಸೂಕ್ತ ವೇದಿಕೆ ಸಿಗದವರಿಗೆ ಜಾಲತಾಣಗಳು ಸಕ್ಸಸ್​ ಕೊಡುತ್ತಿದೆ. ರಾತ್ರೋರಾತ್ರಿ ಅಭಿಮಾನಿಗಳು ಹುಟ್ಟಿಕೊಳ್ಳುವಂತಾಗುತ್ತಿದೆ.

ಇಷ್ಟೇಕೆ ಪೀಠಿಕೆ ಎಂದಿರಾ, ಡ್ಯಾನ್ಸ್​ನ ಒಂದು ವಿಡಿಯೋ ವೈರಲ್​ ಆಗುತ್ತಿದ್ದು, ಇದರಲ್ಲಿ ಮೂವರು ಹುಡುಗರು ಸುಂದರವಾದ ನೃತ್ಯ ಪ್ರದರ್ಶಿಸಿದ್ದು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಮೂವರು ಹುಡುಗರು ಬಿಳಿ ಮುಖವಾಡಗಳು, ಟೋಪಿ ಮತ್ತು ಮ್ಯಾಚಿಂಗ್​ ಬಟ್ಟೆಗಳನ್ನು ಧರಿಸಿರುವುದನ್ನು ಕಾಣಬಹುದು. ಅವರಲ್ಲಿ ಒಬ್ಬರು ಕುಳಿತಿದ್ದಾರೆ ಮತ್ತು ಇಬ್ಬರು ಹುಡುಗರು ಅವನ ಹಿಂದೆ ಮುಖವನ್ನು ತಗ್ಗಿಸಿ ನಿಂತಿದ್ದಾರೆ. ಮೇಲ್ನೋಟಕ್ಕೆ ಏನಾದರೂ ಮ್ಯಾಜಿಕ್​ ಮಾಡಲು ಹೊರಟಿದ್ದಾರೆ ಅನ್ನಿಸಿದರೂ ಕೆಲವೇ ಕ್ಷಣಗಳಲ್ಲಿ ಡ್ಯಾನ್ಸ್​ ಮ್ಯಾಜಿಕ್​ ಮಾಡಿ ನೋಡುಗರನ್ನು ಅಚ್ಚರಿಗೆ ತಳ್ಳುತ್ತಾರೆ.

ಎಲ್ಲಾ ಹುಡುಗರು ಸಿಂಕ್​ ಆಗುವಂತೆ ಫಾಮೇರ್ಶನ್​ಗಳನ್ನು ತಮ್ಮ ಕೈ ಮತ್ತು ಮುಖವನ್ನು ಮಾತ್ರ ಬಳಸಿ ಪ್ರಸ್ತುತಪಡಿಸಿದ್ದು, ಆಕರ್ಷಕ ಎನಿಸುತ್ತದೆ. ಡ್ಯಾನ್ಸ್​ ಟ್ಯುಟೋರಿಯಲ್ಸ್​ ಎಂಬ ಇನ್​ಸ್ಟಾಗ್ರಾಮ್​ ಪುಟವು ವೀಡಿಯೊವನ್ನು ಹಂಚಿಕೊಂಡು, “ಇದು ಇನ್​ಕ್ರೆಡಿಬಲ್​” ಎಂದು ಬರೆದಿದೆ. ನೆಟ್ಟಿಗರೂ ಸಹ ಅಚ್ಚರಿ ವ್ಯಕ್ತಪಡಿಸಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...