alex Certify ʼಮೆಕ್​ ಡೊನಾಲ್ಡ್ʼ​ ​ಗೆ ನುಗ್ಗಿ ತಿಂಡಿ, ಪಾನೀಯ ದೋಚಿದ ಗುಂಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮೆಕ್​ ಡೊನಾಲ್ಡ್ʼ​ ​ಗೆ ನುಗ್ಗಿ ತಿಂಡಿ, ಪಾನೀಯ ದೋಚಿದ ಗುಂಪು

ಯುವಕರ ಗುಂಪು ನಾಟಿಂಗ್​ಹ್ಯಾಮ್​ ನಗರ ಕೇಂದ್ರದಲ್ಲಿರುವ ಮೆಕ್​ಡೊನಾಲ್ಡ್​ ರೆಸ್ಟೋರೆಂಟ್​ಗೆ ನುಗ್ಗಿ ತಿಂಡಿ ತಿನಿಸು ಮತ್ತು ತಂಪು ಪಾನೀಯಗಳನ್ನು ದೋಚಿರುವ ಪ್ರಸಂಗ ನಡೆದಿದೆ.

ಪೊಲೀಸರ ಪ್ರಕಾರ, ಸುಮಾರು 50 ಹದಿಹರೆಯದವರ ಗುಂಪು ಆಗಸ್ಟ್​ 21ರಂದು ರಾತ್ರಿ 9 ಗಂಟೆಗೆ ಕ್ಲಂಬರ್​ ಸ್ಟ್ರೀಟ್​ ಫಾಸ್ಟ್​ ಫುಡ್​ ಚೈನ್​ನಲ್ಲಿ ಸೇರಿತು. ಅಲ್ಲಿದ್ದವರ ವಯಸ್ಸು 14 ರಿಂದ 16ರ ನಡುವೆ ಇತ್ತೆಂದು ಹೇಳಲಾಗಿದೆ.

ವೀಡಿಯೊದಲ್ಲಿ, ಅವರಲ್ಲಿ ಕೆಲವರು ಕೌಂಟರ್​ ಮೇಲೆ ಹಾರಿ ಅಡುಗೆ ಮನೆಯಲ್ಲಿ ತಯಾರಿಸುತ್ತಿದ್ದ ಆಹಾರವನ್ನು ಕದಿಯಲು ಪ್ರಾರಂಭಿಸಿದರು. ಕೆಲವರು ಸಿಬ್ಬಂದಿಯನ್ನು ನಿಂದಿಸಿ ಬೆದರಿಕೆ ಹಾಕಿದ್ದಾರೆ. ಈ ಘಟನೆಯನ್ನು ಇತರರು ತಮ್ಮ ಫೋನ್​ಗಳಲ್ಲಿ ಚಿತ್ರೀಕರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್​ ಆಗಿದ್ದು, ಪೊಲೀಸರು ಸಿಸಿ ಟಿವಿಯನ್ನು ಅಧ್ಯಯನ ಮಾಡುತ್ತಿದ್ದಾರೆ. ಈ ಘಟನೆಯನ್ನು ಕಮರ್ಷಿಯಲ್ ಕಳ್ಳತನ ಎಂದು ಪರಿಗಣಿಸಲಾಗುತ್ತಿದೆ ಎಂದು ಪೊಲೀಸ್​ ವಕ್ತಾರರು ತಿಳಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದಾಗ ಗುಂಪು ಆಗಲೇ ಪರಾರಿಯಾಗಿತ್ತು. ಇನ್ನೂ ಯಾರನ್ನೂ ಬಂಧಿಸಿಲ್ಲ. ಆದರೆ ನಾವು ಕ್ಲಂಬರ್​ ಸ್ಟ್ರೀಟ್​ ಮೆಕ್​ಡೊನಾಲ್ಡ್​ ನೊಂದಿಗೆ ಕೆಲಸ ಮಾಡುತ್ತೇವೆ, ಕದ್ದವರನ್ನು ಕಂಡುಹಿಡಿಯಲು ಸಿಸಿ ಟಿವಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಪೊಲೀಸ್​ ವಕ್ತಾರರು ತಿಳಿಸಿದ್ದಾರೆ.

ನಾವು ಈ ಘಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದು, ಇದು ಕಮರ್ಷಿಯಲ್ ಲೂಟಿ. ಏಕೆಂದರೆ ಆ ಗುಂಪು ವ್ಯಾಪಾರದ ಕೌಂಟರ್​ನ ಹಿಂದೆ ಬಂದು ಬಲವಂತವಾಗಿ ಆಹಾರ ಮತ್ತು ತಂಪು ಪಾನೀಯಗಳನ್ನು ಕದ್ದಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಮೆಕ್​ಡೊನಾಲ್ಡ್ಸ್​ನ ವಕ್ತಾರರೂ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಭಾನುವಾರ ರಾತ್ರಿ ನಮ್ಮ ಕ್ಲಂಬರ್​ ಸ್ಟ್ರೀಟ್​ ರೆಸ್ಟೋರೆಂಟ್​ನಲ್ಲಿ ನಡೆದ ಘಟನೆಯಿಂದ ನಾವು ಆಘಾತ ಮತ್ತು ಗಾಬರಿಗೊಂಡಿದ್ದೇವೆ. ಮುಂದಿನ ತನಿಖೆಗೆ ನಾವು ಪೊಲೀಸರಿಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...