alex Certify ಮದುವೆ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ವರನ ತಾಯಿ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ವರನ ತಾಯಿ: ವಿಡಿಯೋ ವೈರಲ್

ಇತ್ತೀಚೆಗೆ ವಿವಾಹ ಕಾರ್ಯಕ್ರಮದಲ್ಲಿ ಹಲವು ರೀತಿಯ ಹಾಸ್ಯಾತ್ಮಕ ಘಟನೆಗಳು ನಡೆಯುತ್ತಿರುವುದು ಮಾಮೂಲಿಯಾಗಿಬಿಟ್ಟಿದೆ. ಅದರಲ್ಲೂ ಭಾರತೀಯ ವಿವಾಹವು ನೃತ್ಯ ಹಾಗೂ ಸಂಗೀತವಿಲ್ಲದೆ ಅಪೂರ್ಣವಾಗಿದೆ ಅಂತಾನೇ ಹೇಳಬಹುದು. ಇಲ್ಲೊಂದೆಡೆ ವರನ ತಾಯಿ ಮಾಡಿರುವ ನೃತ್ಯವು ಭಾರಿ ವೈರಲ್ ಆಗಿದೆ.

ಹೌದು, ಮದುವೆಗೆ ಬಂದ ಅತಿಥಿಗಳು ವಧು-ವರ ನಿಗೆ ಶುಭ ಹಾರೈಸಲು ಆಗಮಿಸಿದ್ದರೆ, ಅತ್ತ ವರನ ತಾಯಿ ವೇದಿಕೆಯಲ್ಲಿ ನೃತ್ಯ ಮಾಡುವ ಮುಖಾಂತರ ಅತಿಥಿಗಳನ್ನು ರಂಜಿಸಿದ್ದಾರೆ. ವೇದಿಕೆ ಮೇಲೆ ವಧು-ವರ ಕೂತಿದ್ದರೆ, ಗುಲಾಬಿ ಬಣ್ಣದ ಉಡುಗೆ ತೊಟ್ಟಿದ್ದ ವರನ ತಾಯಿ ಪಂಜಾಬಿ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿ, ಬಂದಿರುವ ಅತಿಥಿಗಳನ್ನು ಬೆರಗುಗೊಳಿಸಿದ್ದಾರೆ. ತಾಯಿ ಜಬರ್ದಸ್ತ್ ಸ್ಟೆಪ್ಸ್ ಕಂಡ ವರನ ಸಹೋದರ ಕೂಡ ಅವರ ಜೊತೆ ಕುಣಿದು ಕುಪ್ಪಳಿಸಿದ್ದಾನೆ.

ಸಹೋದರನ ಜತೆ ಯುಜ್ವೇಂದ್ರ ಚಹಾಲ್ ಪತ್ನಿ ಸಖತ್ ಸ್ಟೆಪ್ಸ್: ಹಳೆ ವಿಡಿಯೋ ಮತ್ತೆ ವೈರಲ್….!

ಈ ಡ್ಯಾನ್ಸ್ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ‘ನನ್ನ ರಾಕಿಂಗ್ ತಾಯಿ’ ಅಂತಾ ಶೀರ್ಷಿಕೆ ನೀಡಲಾಗಿದೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದ್ದು, 96 ಸಾವಿರಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. ನೆಟ್ಟಿಗರು ಈಕೆಯ ನೃತ್ಯಕ್ಕೆ ಮಾರುಹೋಗಿದ್ದು, ಪ್ರಶಂಸೆಯ ಮಹಾಪೂರವನ್ನೇ ಹರಿಸಿದ್ದಾರೆ. ಇದಕ್ಕೆ ಹೇಳೋದಲ್ವಾ ವಯಸ್ಸು ಕೇವಲ ನಂಬರ್ ಅಷ್ಟೇ….. ಆದರೆ ಉತ್ಸಾಹಕ್ಕೆ ವಯಸ್ಸು ಅಡ್ಡಿಯಲ್ಲ ಅನ್ನೋದನ್ನು ಈ ಮಹಿಳೆ ಪ್ರೂವ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...