alex Certify ವಿವಾಹ ಸಮಾರಂಭಗಳಿಗೂ ಇದೆ ವಿಮೆ…! ಯಾವೆಲ್ಲ ನಷ್ಟ ಕವರ್‌ ಆಗುತ್ತೆ ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹ ಸಮಾರಂಭಗಳಿಗೂ ಇದೆ ವಿಮೆ…! ಯಾವೆಲ್ಲ ನಷ್ಟ ಕವರ್‌ ಆಗುತ್ತೆ ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

ಕಳೆದ ವರ್ಷ ಕೊರೊನಾ ವೈರಸ್​ ಅಪ್ಪಳಿಸಿದಾಗಿನಿಂದ ದೇಶದಲ್ಲಿ ಅದೆಷ್ಟೋ ಮದುವೆಗಳು ಮುಂದೂಡಲ್ಪಟ್ಟಿವೆ, ಕೆಲವೊಂದು ಮದುವೆಗಳ ಸರ್ಕಾರ ಕಠಿಣ ನಿರ್ಬಂಧಗಳಿಂದಾಗಿ ರದ್ದಾಗಿದ್ದರೆ, ಇನ್ನು ಕೆಲವರು ಸಂಬಂಧಿಕರಿಗೆ ಮದುವೆಗೆ ಬರಲು ಆಗೋದಿಲ್ಲ ಅಂತಾ ಮದುವೆ ಕಾರ್ಯಕ್ರಮವನ್ನು ರದ್ದು ಮಾಡಿದ್ದುಂಟು.

ಇದೀಗ ಮತ್ತೆ ಮದುವೆ ಸೀಸನ್​ ಆರಂಭವಾಗಿದೆ. ಆದರೆ ಹೆಚ್ಚುತ್ತಿರುವ ಒಮಿಕ್ರಾನ್​ ಪ್ರಕರಣಗಳನ್ನು ನೋಡುತ್ತಿದ್ದರೆ ಮತ್ತೊಮ್ಮೆ ಮದುವೆಗಳು ರದ್ದಾಗೋದ್ರಲ್ಲಿ ಯಾವುದೇ ಸಂಶಯ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಿಮಗೆ ಉಂಟಾಗುವ ಆರ್ಥಿಕ ನಷ್ಟವನ್ನು ತುಂಬಿಕೊಡಲು ನೀವು ವಿವಾಹ ವಿಮೆಯನ್ನು ಮಾಡಿಕೊಳ್ಳಬಹುದಾಗಿದೆ.

ಕೊನೆಗಳಿಗೆಯಲ್ಲಿ ಮದುವೆ ರದ್ದಾಗೋದು ಅಥವಾ ಮುಂದೂಡಲ್ಪಡೋದು ಯಾರಿಗೆ ತಾನೇ ಇಷ್ಟವಿರುತ್ತೆ ಹೇಳಿ. ಕೊನೆ ಗಳಿಗೆಯಲ್ಲಿ ಮದುವೆ ರದ್ದಾದರೆ ಉಂಟಾಗುವ ಆರ್ಥಿಕ ನಷ್ಟವನ್ನು ತುಂಬಿಕೊಡಲೂ ಸಹ ಯಾರೂ ಬರೋದಿಲ್ಲ. ಇಂತಹ ಸಂದರ್ಭಗಳಲ್ಲಿ ವಿಮೆಯು ನಿಮ್ಮ ಸಹಾಯಕ್ಕೆ ಬರಲಿದೆ.

ವಿವಾಹ ವಿಮೆಯು ನಾಲ್ಕು ಬಗೆಯ ಸಂದರ್ಭಗಳಲ್ಲಿ ನಿಮ್ಮ ಹಣವನ್ನು ಕವರ್​ ಮಾಡುತ್ತವೆ. ಹಾಗಾದರೆ ಅವು ಯಾವುವು ಎಂಬುದನ್ನು ನೋಡೋಣ :

ಬಾಧ್ಯತೆಗಳು​ : ಮೂರನೇ ವ್ಯಕ್ತಿಯಿಂದ ಮದುವೆ ಕಾರ್ಯಕ್ರಮಗಳಲ್ಲಿ ಉಂಟಾಗುವ ಅಪಘಾತಗಳಿಂದಾಗಿ ಸಂಭವಿಸುವ ಯಾವುದೇ ನಷ್ಟವನ್ನು ಇದು ತುಂಬಿಕೊಡುತ್ತದೆ.

ಕ್ಯಾನ್ಸಲೇಷನ್​ ಕವರೇಜ್​ : ಮದುವೆ ಸಡನ್​ ಆಗಿ ರದ್ದಾದರೆ ಆಗ ಉಂಟಾಗುವ ನಷ್ಟಗಳನ್ನು ಭರಿಸುತ್ತದೆ.

ಪ್ರಾಪರ್ಟಿ ಡ್ಯಾಮೇಜ್ ​: ಮದುವೆ ಕಾರ್ಯಕ್ರಮಗಳಲ್ಲಿ ಉಂಟಾಗುವ ಪ್ರಾಪರ್ಟಿ ಡ್ಯಾಮೇಜ್​ಗಳ ನಷ್ಟವನ್ನು ಭರಿಸುತ್ತದೆ.

ವೈಯಕ್ತಿಕ ಅಪಘಾತ : ಮದುವೆ ಸಮಯದಲ್ಲಿ ವಧು ಅಥವಾ ವರನಿಗೆ ಅಪಘಾತವಾದಲ್ಲಿ ಆಸ್ಪತ್ರೆ ವೆಚ್ಚವನ್ನು ಭರಿಸುತ್ತದೆ.

ಕ್ಯಾಟರಿಂಗ್​​ಗೆ ನೀಡಲಾದ ಮುಂಗಡ ಹಣ.

ಮದುವೆ ಆಯೋಜಕರಿಗೆ ನೀಡಲಾದ ಮುಂಗಡ ಹಣ.

ಟ್ರಾವೆಲ್​ ಏಜೆನ್ಸಿಗಳಿಗೆ ನೀಡಲಾದ ಮುಂಗಡ ಹಣ.

ಹೋಟೆಲ್​ ರೂಮ್​ಗಳನ್ನು ಬುಕ್ ಮಾಡಲು ನೀಡಲಾದ ಹಣ.

ಮದುವೆ ಆಮಂತ್ರಣ ಪತ್ರಿಕೆ ಮುದ್ರಣ ವೆಚ್ಚ.

ಮ್ಯೂಸಿಕ್​ ಹಾಗೂ ಡೆಕೋರೇಷನ್​ಗೆ ನೀಡಲಾದ ಹಣ.

ವಿವಾಹ ವಿಮೆ ಮಾಡಿಸಿದ ನೀವು ಮದುವೆ ದಿನಗಳಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗಿ ಮದುವೆ ರದ್ದಾದಲ್ಲಿ ಕೂಡಲೇ ಇನ್ಶುರೆನ್ಸ್​ ಕಂಪನಿಗೆ ಮಾಹಿತಿ ನೀಡಬಹುದು. ಇದಾದ ಬಳಿಕ ವಿಮಾ ಕಂಪನಿಯಿಂದ ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಯಲಿದೆ. ನೀವು ಸೂಕ್ತ ಕಾರಣಗಳಿಂದ ನಷ್ಟವನ್ನು ಅನುಭವಿಸಿರುವುದು ಸಾಬೀತಾದಲ್ಲಿ ಆ ಹಣವನ್ನು ವಿಮೆಯು ಭರಿಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...