alex Certify ದಿವ್ಯಾಂಗಿ ನಾದಿನಿಯನ್ನು ಬಾಹುಗಳಲ್ಲಿ ಹೊತ್ತು ಕರೆತಂದ ಮದುಮಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿವ್ಯಾಂಗಿ ನಾದಿನಿಯನ್ನು ಬಾಹುಗಳಲ್ಲಿ ಹೊತ್ತು ಕರೆತಂದ ಮದುಮಗ

ಮದುವೆ ಮನೆಗೆ ಬರುತ್ತಿದ್ದ ದಿವ್ಯಾಂಗಿ ನಾದಿನಿಯನ್ನು ಹೊತ್ತುಕೊಂಡು ಮಂಟಪ ತಲುಪಿಸಿದ ಮದುಮಗನೊಬ್ಬನ ಹೃದಯ ವೈಶಾಲ್ಯತೆ ನೆಟ್ಟಿಗರ ಮನ ಗೆದ್ದಿದೆ.

ತನ್ನ ಮದುವೆಯ ದಿನದ ಈ ಹೃದಯಸ್ಪರ್ಶಿ ಘಟನೆಯನ್ನು ಟಿಕ್‌ ಟಾಕ್‌ನಲ್ಲಿ ಶೇರ್‌ ಮಾಡಿಕೊಂಡ ಮದುಮಗಳು ಮೋರ್ಗನ್ ಆಲ್ಟಿಯರ್‌, ತನ್ನ ಅವಳಿ ಸಹೋದರಿ ಮೇಸಿಗೆ ಮದುವೆಯ ದಿನ ವಿಶೇಷವಾದ ಅನುಭವವಾಗಬೇಕೆಂದು ತಾನು ಬಯಸಿದ್ದಾಗಿ ಹೇಳಿಕೊಂಡಿದ್ದಾರೆ.

ನೆಮ್ಮದಿ, ಖುಷಿ ಜೀವನ ಬಯಸುವವರಿಗೆ ಇಲ್ಲಿದೆ ಟಿಪ್ಸ್

ಕಪ್ಪು ಬಣ್ಣದ ಟಕ್ಸೆಡೋ ಧರಿಸಿರುವ ಮದುಮಗ ತನ್ನ ನಾದಿನಿಯನ್ನು ಬಾಹುಗಳಲ್ಲಿ ಹೊತ್ತೊಯ್ಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇದನ್ನು ಕಂಡ ಅತಿಥಿಗಳು ಮದುಮಗನಿಗೆ ಮೆಚ್ಚುಗೆಯ ಚಪ್ಪಾಳೆ ಹಾಕಿದ್ದಾರೆ. ತನ್ನ ಸಹೋದರಿಯಂತೆಯೇ ಮೇಸಿ ಸಹ ಬಿಳಿ ಬಣ್ಣದ ಗೌನ್ ಧರಿಸಿದ್ದಾರೆ.

“ವಿಶೇಷ ಅಗತ್ಯವುಳ್ಳ ನನ್ನ ಅವಳಿ ಸಹೋದರಿ ನನ್ನ ಪತಿಯೊಂದಿಗೆ ನನ್ನ ಮದುವೆಗೆ ಆಗಮಿಸಿದ್ದಾಳೆ. ನಾನು ಇದನ್ನು ಯಾವಾಗಲೂ ಸ್ಮರಿಸುತ್ತೇನೆ. ಇದಕ್ಕೇ ನಾನು ಆತನ ಪ್ರೇಮದಲ್ಲಿ ಬಿದ್ದಿದ್ದು, ಏಕೆಂದರೆ ಆತ ನನ್ನ ಸಹೋದರಿಯನ್ನು ನನ್ನಷ್ಟೇ ಪ್ರೀತಿಸುತ್ತಾನೆ” ಎಂದು ವಿಡಿಯೋ ಕ್ಲಿಪ್‌ಗೆ ಕ್ಯಾಪ್ಷನ್ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...