alex Certify ಬಾಲಕಿಯನ್ನು ಶಾಲೆಯವರೆಗೂ ಹಿಂಬಾಲಿಸುತ್ತೆ ಈ ಮೇಕೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿಯನ್ನು ಶಾಲೆಯವರೆಗೂ ಹಿಂಬಾಲಿಸುತ್ತೆ ಈ ಮೇಕೆ….!

ಮನುಷ್ಯನ ಉತ್ತಮ ಸ್ನೇಹಿತ ಎಂದರೆ ಸಾಕು ನಾಯಿ ಎಂಬಂತಹ ಹಲವು ನಿದರ್ಶನಗಳು ಕಾಣಸಿಗುತ್ತವೆ. ಇದಕ್ಕೆ ಪೂರಕವಾದ ಹಲವು ವಿಡಿಯೊಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆದರೆ ಎಂದಾದರೂ ಮೇಕೆಯೊಂದು ಬಾಲಕಿಯನ್ನು ಪ್ರೀತಿಯಿಂದ ಹಿಂಬಾಲಿಸಿರುವುದು ನೋಡಿದ್ದೀರಾ? ಅಥವಾ ಕೇಳಿದ್ದೀರಾ?

ಇಂಥದ್ದೊಂದು ಅಪರೂಪದ ಪ್ರಸಂಗ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಅದರ ವಿಡಿಯೊವನ್ನು ಡಾ. ಅಜಯಿತಾ ಎನ್ನುವವರು ಟ್ವಿಟರ್‌ ಖಾತೆದಾರರು ಹಂಚಿಕೊಂಡಿದ್ದಾರೆ.

ನೀಲಿ ಬಣ್ಣದ ಕುರ್ತಾ , ಕಪ್ಪು ಪೈಜಾಮ ಧರಿಸಿಕೊಂಡು ಹೆಗಲಿಗೆ ಬ್ಯಾಗ್‌ ನೇತಾಕಿಕೊಂಡು, ಎರಡು ಜಡೆಯ ಬಾಲಕಿಯೊಬ್ಬಳು ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾಳೆ.
ಅವಳ ಹಿಂದೆಯೇ ತಾನು ಕೂಡ ಶಾಲೆಗೆ ಹೋಗುವ ಧಾವಂತದಲ್ಲಿ ಬಿಳಿ ಮೇಕೆಯೊಂದು ಜಿಗಿಯುತ್ತಾ ಸಾಗುತ್ತಿದೆ.

ಬಾಲಕಿ ವೇಗವಾಗಿ ಓಡಿದರೂ, ಅವಳಷ್ಟೇ ಜೋರಾಗಿ ಜಿಗಿಯುತ್ತಲೇ ಮೇಕೆ ಹಿಂಬಾಲಿಸುತ್ತದೆ.

ಗಲ್ಲಿಗಲ್ಲಿಗಳು, ತಿರುವುಗಳಲ್ಲೂ ಕೂಡ ಮೇಕೆ ಬೇರೆ ಕಡೆಗೆ ಸಾಗುವುದಿಲ್ಲ. ಶಾಲೆಯ ಬಗ್ಗೆ ಬಾಲಕಿಯಷ್ಟೇ ಶ್ರದ್ಧೆ ಕೂಡ ಮೇಕೆಗೆ ಇದೆ ಇರಬೇಕು ಎಂದು ನೆಟ್ಟಿಗರು ವಿಡಿಯೊ ನೋಡಿ ಹಾಸ್ಯ ಮಾಡಿದ್ದಾರೆ.

8 ಕಾಲು, 2 ಸೊಂಟವಿರುವ ವಿಚಿತ್ರ ಮೇಕೆ ಜನನ…!

ವಿಡಿಯೊಗೆ ಮಾತ್ರ ‘ Dr. Ajayita (@DoctorAjayita) ‘ ಅವರುʼಇಬ್ಬರು ಸ್ನೇಹಿತರ ಶಾಲೆಯ ಕಡೆಗಿನ ಪಯಣ’ ಎಂದು ಚೆಂದವಾದ ಸಾಲು ಬರೆದಿದ್ದಾರೆ.

— Dr. Ajayita (@DoctorAjayita) September 20, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...