alex Certify ರೀಲ್ಸ್​ ಮಾಡುವ ಮೊದಲೇ ವೈರಲ್​ ಆದ ಯುವತಿ….! ಡಾನ್ಸ್​ ಮಾಡಲು ಕೈಎತ್ತುತ್ತಿದ್ದಂತೆಯೇ ಆಗಿದ್ದೇನು ನೋಡಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೀಲ್ಸ್​ ಮಾಡುವ ಮೊದಲೇ ವೈರಲ್​ ಆದ ಯುವತಿ….! ಡಾನ್ಸ್​ ಮಾಡಲು ಕೈಎತ್ತುತ್ತಿದ್ದಂತೆಯೇ ಆಗಿದ್ದೇನು ನೋಡಿ…..!

ರೀಲ್ಸ್​ ಹುಚ್ಚು ಇಂದು ಹಲವು ಯುವಕ-ಯುವತಿಯರಿಗೆ ಅಂಟಿಕೊಂಡಿದೆ. ಏನಾದರೊಂದು ಮಾಡಿ ರೀಲ್ಸ್​ ರೂಪದಲ್ಲಿ ಅದನ್ನು ಶೇರ್​ ಮಾಡಿಕೊಂಡು ಒಂದಿಷ್ಟು ಲೈಕ್ಸ್​, ಕಮೆಂಟ್​ ಗಳಿಸುವ ಆಸೆ. ಇದೇ ಕಾರಣಕ್ಕೆ ಥಹರೇವಾರಿ ರೀಲ್ಸ್​ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದು. ಅವುಗಳ ಪೈಕಿ ಅತ್ಯಂತ ಫನ್ನಿ ಆಗಿರುವ ವಿಡಿಯೋ ಒಂದು ವೈರಲ್​ ಆಗಿದೆ.

ಅಸಲಿಗೆ ರೀಲ್ಸ್​ ಮಾಡಲು ಹೋದ ಯುವತಿಗೆ ಆದ ಎಡವಟ್ಟೇ ದೊಡ್ಡ ರೀಲ್ಸ್​ ರೂಪದಲ್ಲಿ ವೈರಲ್​ ಆಗುತ್ತಿದ್ದು, ಬಿದ್ದೂ ಬಿದ್ದೂ ನಗುವಂತಿದೆ. ಇನ್​ಸ್ಟಾಗ್ರಾಮ್​ಗಾಗಿ ರೀಲ್ಸ್​ ಮಾಡಲು ಹೋದ ಯುವತಿ ಪಟ್ಟ ಫಜೀತಿ ಇದಾಗಿದೆ.

ಟೆರೇಸ್​ ಮೇಲೆ ಹೋದ ಯುವತಿಯು ರೀಲ್ಸ್​ಗಾಗಿ ಡಾನ್ಸ್​ ಮಾಡಲು ಮುಂದಾಗುತ್ತಾಳೆ. ಹಿನ್ನೆಲೆಯಲ್ಲಿ ಒಂದು ಹಾಡನ್ನೂ ಹಾಕಿಕೊಂಡಿದ್ದಾಳೆ. ಡಾನ್ಸ್​ ಮಾಡಲು ಆಕೆ ಕೈ ಮೇಲಕ್ಕೆ ಎತ್ತುತ್ತಿದ್ದಂತೆಯೇ ಜೋರಾಗಿ ಗುಡುಗು, ಮಿಂಚು ಬಂದಿದೆ. ಇದರ ಆರ್ಭಟ ಕೇಳುತ್ತಿದ್ದಂತೆಯೇ ಹುಡುಗಿ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ.

ಮಳೆ ಬರುವ ಸಮಯದಲ್ಲಿ ರೀಲ್ಸ್​ ಮಾಡಲು ಹೋದ ಈ ಯುವತಿ ಬೇರೆಯದ್ದೇ ರೀತಿಯಲ್ಲಿ ವೈರಲ್​ ಆಗಿದ್ದು, ನೋಡುಗರು ಮಾತ್ರ ತಮಾಷೆ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...