alex Certify ಮದುವೆ ಶಾಸ್ತ್ರಕ್ಕೂ ಮುನ್ನ ವಧು ಮಾಡಿದ ಕೆಲಸ ಕಂಡು ದಂಗಾದ ನೆಟ್ಟಿಗರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಶಾಸ್ತ್ರಕ್ಕೂ ಮುನ್ನ ವಧು ಮಾಡಿದ ಕೆಲಸ ಕಂಡು ದಂಗಾದ ನೆಟ್ಟಿಗರು..!

ಮದುವೆ ದಿನದಂದು ವಧು ಹಾಗೂ ವರರು ಅತ್ಯಂತ ಸುಂದರವಾಗಿ ಕಾಣಬೇಕು ಎಂಬ ಆಸೆಯನ್ನು ಹೊಂದಿರ್ತಾರೆ. ಹಸೆಮಣೆ ಏರಲಿರುವ ಯುವತಿಯರಂತೂ ಮದುವೆಗೆ ಕೆಲ ತಿಂಗಳು ಬಾಕಿ ಇರುವಾಗಲೇ ಡಯಟ್​ ಆರಂಭಿಸುತ್ತಾರೆ. ತಮ್ಮಿಷ್ಟದ ಎಲ್ಲಾ ತಿನಿಸುಗಳ ಸೇವನೆ ಬಿಟ್ಟು ಮದುವೆ ದಿನ ಸುಂದರವಾಗಿ ಕಾಣಬೇಕು ಎಂಬ ಕನಸು ಕಾಣೋಕೆ ಶುರು ಮಾಡ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ವಧುವಿಗೆ ಸಂಬಂಧಿಸಿದ ವಿಡಿಯೋವೊಂದು ಗಲ್ಲಾಪೆಟ್ಟಿಗೆ ಸದ್ದು ಮಾಡ್ತಿದೆ. ಮದುವೆಗೂ ಮುನ್ನ ವಧು ದೋಸೆ ಹಾಗೂ ಐಸ್​ಕ್ರೀಂ ಸೇವಿಸುವ ವಿಡಿಯೋ ಇದಾಗಿದೆ. ಮದುವೆ ಕಾರ್ಯಕ್ರಮಕ್ಕೂ ಮುನ್ನ ವಧು ಅಲಂಕಾರದಲ್ಲಿ ನಿರತರಾಗಿದ್ದರು, ಕಂದು ಬಣ್ಣದ ಲೆಹೆಂಗಾ ಹಾಗೂ ಅಕರ್ಷಕ ಆಭರಣ ತೊಟ್ಟಿರುವ ವಧು ದೋಸೆ ಹಾಗೂ ಐಸ್​ಕ್ರಿಂನ್ನು ಎಂಜಾಯ್​ ಮಾಡುತ್ತಾ ಸವಿದಿದ್ದಾರೆ.

ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿರುವ ವಧು ವೈದಿಕಾ ಚಿರಾಗ್​ ಸಕ್ಸೇನಾ, ಆಹಾರ ಪ್ರಿಯರ ಅತಿದೊಡ್ಡ ಸಮಸ್ಯೆ ಇದು, ಆಹಾರವೇ ಜೀವನ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ವಧುವಿನ ದೋಸೆ ಪ್ರೇಮ ಕಂಡು ನಕ್ಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...