alex Certify ಮನುಷ್ಯರಂತೆ ನಡೆಯುತ್ತೆ ಈ ಶ್ವಾನ…! ಇದರ ಹಿಂದಿದೆ ಮನಕಲಕುವ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನುಷ್ಯರಂತೆ ನಡೆಯುತ್ತೆ ಈ ಶ್ವಾನ…! ಇದರ ಹಿಂದಿದೆ ಮನಕಲಕುವ ಕಾರಣ

ಅಪಘಾತದಲ್ಲಿ ತನ್ನ ಒಂದು ಕಾಲನ್ನು ಕಳೆದುಕೊಂಡ ನಂತರ ನಾಯಿಯೊಂದು ಮನುಷ್ಯನಂತೆ ನೇರವಾಗಿ ನಡೆಯಲು ಕಲಿತಿದೆ. ಡೆಕ್ಸ್ಟರ್ ಎಂಬ ಸಾಕು ನಾಯಿಗೆ ಆರು ವರ್ಷವಾಗಿದ್ದು, ಕಾರು ಅಪಘಾತವಾದ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿತ್ತು.

ಆದ್ರೂ ತನ್ನ ಒಂದು ಕಾಲನ್ನು ಕಳೆದುಕೊಳ್ಳಬೇಕಾಯ್ತು. ಹೀಗಾಗಿ ನಾಯಿ ತನ್ನ ಹಿಂಗಾಲುಗಳ ಮೇಲೆ ನಡೆಯಲು ಕಲಿತಿದೆ.

ಮದುವೆ ದಿನದಂದು ವರನಿಗೆ ಸರ್ಫ್ರೈಸ್‌ ನೀಡಿದ ಸ್ನೇಹಿತರು

ಡೆಕ್ಸ್ಟರ್‌ನ ಮಾಲೀಕರು ಅದು ಹಿಂಗಾಲುಗಳ ಮೇಲೆ ನಡೆಯುವ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ನಾಯಿಯು ಎಲ್ಲೆಡೆ ಮನುಷ್ಯರಂತೆ ಎರಡು ಕಾಲಲ್ಲಿ ನಡೆಯುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು.

ಮೊದಲಿಗೆ ಸ್ಥಳೀಯರು ಎರಡು ಕಾಲಲ್ಲಿ ನಡೆಯುತ್ತಿರುವ ಶ್ವಾನವನ್ನು ಕಂಡು ಅಚ್ಚರಿ ಪಟ್ಟಿದ್ದಾರೆ. ನೆಟ್ಟಿಗರು ಕೂಡ ನಾಯಿಯ ವಿಡಿಯೋ ನೋಡಿ ಖುಷಿಪಟ್ಟಿದ್ದಾರೆ.

https://youtu.be/omtUU_Y29bY

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...