alex Certify ಗಣೇಶನ ಮೇಲೆ ಮುದ್ದು ನಾಯಿಗಿರುವ ಭಕ್ತಿಯ ವಿಡಿಯೋ ವೈರಲ್​: ಶರಣು ಶರಣು ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣೇಶನ ಮೇಲೆ ಮುದ್ದು ನಾಯಿಗಿರುವ ಭಕ್ತಿಯ ವಿಡಿಯೋ ವೈರಲ್​: ಶರಣು ಶರಣು ಎಂದ ನೆಟ್ಟಿಗರು

ಭಾರತ ಮತ್ತು ಪ್ರಪಂಚದ ಸಾವಿರಾರು ಜನರು ಗಣಪತಿಯನ್ನು ಪೂಜಿಸುತ್ತಾರೆ. ಆದರೆ ನಾಯಿಯೊಂದು ದೇವಾಲಯದಲ್ಲಿ ಇರುವ ಗಣೇಶನಿಗೆ ತನ್ನ ಮಾಲೀಕನ ಜತೆ ವಿನಮ್ರದಿಂದ ಬಾಗಿ ನಮಸ್ಕರಿಸುವ ವಿಡಿಯೋ ಒಂದು ವೈರಲ್​ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸುತ್ತದೆ.

ಮುದ್ದಿನ ನಾಯಿಯೊಂದು ತನ್ನ ಮಾಲೀಕನ ಜೊತೆಯಲ್ಲಿ ಬಂದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ದೇವಸ್ಥಾನದಲ್ಲಿ ಗಣೇಶ ಮೂರ್ತಿಯ ಮುಂದೆ ವ್ಯಕ್ತಿಯೊಬ್ಬರು ಕೈ ಜೋಡಿಸಿ ನಿಂತು ಪ್ರಾರ್ಥಿಸುತ್ತಿದ್ದರೆ, ಅವರ ಪಕ್ಕದಲ್ಲ ಇರುವ ಮುದ್ದಾದ ನಾಯಿಯು ಬಪ್ಪನ ಮುಂದೆ ತಲೆಬಾಗಿ ನಮಸ್ಕರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಮಾಲೀಕ ಗಣಪತಿಗೆ ಗೌರವ ಸಲ್ಲಿಸುವುದನ್ನು ಮುಗಿಸಿದಾಗ, ನಾಯಿ ಕೂಡ ಆತನೊಂದಿಗೆ ಎದ್ದು ಹೋಗುವ ವಿಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನಾಯಿಯ ಭಕ್ತಿಗೆ ಜನರು ಶರಣು ಶರಣು ಎಂದಿದ್ದಾರೆ.

‘thrifts_grace’ ಬಳಕೆದಾರರು ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಇದಾಗಲೇ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಮತ್ತು 2.61 ಲಕ್ಷ ಲೈಕ್ಸ್​ ಪಡೆದುಕೊಂಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...