alex Certify ಚಿಟ್ಟೆಗಳನ್ನು ಕಂಡು ಖುಷಿಯಾದ ಶ್ವಾನ…! ನೀವು ನೋಡಲೇಬೇಕು ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಟ್ಟೆಗಳನ್ನು ಕಂಡು ಖುಷಿಯಾದ ಶ್ವಾನ…! ನೀವು ನೋಡಲೇಬೇಕು ಈ ವಿಡಿಯೋ

ಬಹುಶಃ ಅಂತರ್ಜಾಲದಲ್ಲಿ ನಾಯಿಗಳು, ಬೆಕ್ಕುಗಳ ಮುದ್ದಾದ ವಿಡಿಯೋಗಳು ಲಕ್ಷದಷ್ಟು ಇರಬಹುದು. ಮನೆಯಲ್ಲೇ ನಾಯಿ, ಬೆಕ್ಕುಗಳನ್ನು ಸಾಕಿಕೊಂಡವರ ಬಳಿ ಸಾವಿರದಷ್ಟು ಫೋಟೊ, ವಿಡಿಯೋಗಳು ಸಂಗ್ರಹವಾಗಿರುತ್ತದೆ.

ಆದರೆ ಟ್ವಿಟರ್‍ನಲ್ಲಿ ವೈರಲ್ ಆಗಿರುವ ಈ ಕಪ್ಪು ನಾಯಿ ಹಾಗೂ ಚಿಟ್ಟೆಗಳ ನಡುವಿನ ಸಂಭ್ರಮದ ವಿಡಿಯೋ ಸದ್ಯಕ್ಕೆ ಹಾಟ್ ಫೇವರೇಟ್ ಆಗಿದೆ. ಸದಾಕಾಲ ಜನಪ್ರಿಯ ವಿಡಿಯೋಗಳನ್ನು ಪೋಸ್ಟ್ ಮಾಡುವ ಟ್ವಿಟರ್‍ನ ‘Buitengebieden’ ಹೆಸರಿನ ಈ ಖಾತೆಯಿಂದಲೇ ನಾಯಿಯ ವಿಡಿಯೋ ಪೋಸ್ಟ್ ಆಗಿದೆ.

ರಾಜಸ್ಥಾನ ಪಂಚಾಯಿತಿ ಚುನಾವಣೆಯಲ್ಲಿ ‘ಕೈ’ ಮುನ್ನಡೆ, 670 ಸೀಟುಗಳಲ್ಲಿ ಜಯಭೇರಿ

25 ಸಾವಿರಕ್ಕೂ ಅಧಿಕ ಟ್ವೀಟಿಗರು ಈ ವಿಡಿಯೋವನ್ನು ರಿಟ್ವೀಟ್ ಮಾಡಿದ್ದಾರೆ. 10 ಲಕ್ಷಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ. ಕಪ್ಪು ನಾಯಿ ಮರಿಯು ತನ್ನನ್ನು ಬಾಧಿಸುವ ಎರಡು ಚಿಟ್ಟೆಗಳನ್ನು ಕುತೂಹಲದಿಂದ ನೋಡುವುದು, ಚಿಟ್ಟೆಯು ಮೂಗಿನ ಮೇಲೆ ಕೂತಾಗಲೂ ಸುಮ್ಮನೆ ನೋಡುತ್ತಾ ಸಂಭ್ರಮಿಸುವುದು ಬಹಳ ಮುದ್ದಾಗಿದೆ. ಅಂದಹಾಗೆ, ಟೆನ್ನಿಸ್‍ಬಾಲ್ ಆಟದಲ್ಲಿ ಮಗ್ನವಾಗಿದ್ದ ನಾಯಿಮರಿಯನ್ನು ತಮ್ಮತ್ತ ಸೆಳೆದ ಚಿಟ್ಟೆಗಳೇನು ಕಡಿಮೆ ಚೂಟಿ ಇಲ್ಲ, ಅಲ್ಲವೇ?

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...