alex Certify ಮತ್ತೆ ಮತ್ತೆ ನೋಡಬೇಕೆನಿಸುತ್ತೆ ಈ ಡಾನ್ಸ್……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಮತ್ತೆ ನೋಡಬೇಕೆನಿಸುತ್ತೆ ಈ ಡಾನ್ಸ್……!

ಸಾಮಾಜಿಕ ಜಾಲತಾಣಗಳಲ್ಲಿ ನೃತ್ಯದ ವಿಡಿಯೋವೊಂದು ವೈರಲ್ ಆಗಿದ್ದು, ಇದನ್ನು ನೋಡಿದ್ರೆ ನಿಮ್ಮ ಮುಖದಲ್ಲಿ ನಗು ಮೂಡುವುದರಲ್ಲಿ ಸಂಶಯವಿಲ್ಲ. ವಿದೇಶಿ ವ್ಯಕ್ತಿಯೊಬ್ಬರು ಭಾರತದ ಬೀದಿಯಲ್ಲಿ ನೃತ್ಯ ಮಾಡಿದ್ದಾರೆ. ಈ ವೇಳೆ ಅವರ ಜೊತೆ ಸೇರಿಕೊಂಡ ವೃದ್ಧರೊಬ್ಬರು ಬಾಲಿವುಡ್ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.

ವೃದ್ಧ ಹಾಗೂ ವಿದೇಶಿಗ, ರಸ್ತೆಯ ಬದಿಯಲ್ಲಿ ಸಲ್ಮಾನ್ ಖಾನ್-ಕಾಜೋಲ್ ಅಭಿನಯದ ಪ್ಯಾರ್ ಕಿಯಾ ತೋ ಡರ್ನಾ ಕ್ಯಾದ, ಓ ಓ ಜಾನೇ ಜಾನಾಗೆ ನೃತ್ಯ ಮಾಡಿದ್ದಾರೆ. ಇವರ ನೃತ್ಯಕ್ಕೆ ಜನಸಮೂಹ ಸೇರಿದ್ದು, ಇವರಿಬ್ಬರು ಕುಣಿಯುವುದನ್ನು ನೋಡಿ ಆನಂದಿಸಿದ್ದಾರೆ.

ವಿದೇಶಿಗ ಹಾಡಿನ ಲಯಕ್ಕೆ ತಕ್ಕ ಹಾಗೆ ನೃತ್ಯ ಮಾಡಿದ್ದರೆ, ವೃದ್ಧ ವ್ಯಕ್ತಿಯು ಆನಂದಿಸುತ್ತಾ ನರ್ತಿಸಿದ್ದಾರೆ. ಅಲ್ಲದೆ ಸಖತ್ತಾಗಿ ಸ್ಟೆಪ್ ಕೂಡ ಹಾಕಿದ್ದಾರೆ. ಕುಣಿದು ಕುಪ್ಪಳಿಸಿದ ಬಳಿಕ ವಿದೇಶಿಗ ವೃದ್ಧ ವ್ಯಕ್ತಿಗೆ ಕೈ ಕುಲುಕಿದ್ದು, ಅವರನ್ನು ಪ್ರೋತ್ಸಾಹಿಸಿದ್ದಾನೆ.

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ದಾದಾಜಿ (ವೃದ್ಧ ವ್ಯಕ್ತಿ) ಅವರ ಅದ್ಭುತ ನೃತ್ಯ ಕಂಡ ನೆಟ್ಟಿಗರು ಮನಸೋತಿದ್ದಾರೆ. ನಿಮ್ಮ ನೃತ್ಯವನ್ನು ಹೀಗೆಯೇ ಮುಂದುವರೆಸಿ ತಾತಾ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.

— sudhirdandotiya (@sudhirdandotiya) November 19, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...