alex Certify ಕೆರೆಯಲ್ಲಿ ನೀರು ಕುಡಿಯಲು ಬಂದ ಹಸುವಿನ ಮೇಲೆ ಮೊಸಳೆ ದಾಳಿ: ಭಯಾನಕ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆರೆಯಲ್ಲಿ ನೀರು ಕುಡಿಯಲು ಬಂದ ಹಸುವಿನ ಮೇಲೆ ಮೊಸಳೆ ದಾಳಿ: ಭಯಾನಕ ವಿಡಿಯೋ ವೈರಲ್​

ಪಕ್ಷಿ-ಪ್ರಾಣಿ ಪ್ರಪಂಚದ ರೋಚಕ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಆಗುತ್ತವೆ. ಕೆಲವೊಂದು ವಿಡಿಯೋ ಖುಷಿಕೊಟ್ಟರೆ, ಕೆಲವೊಮ್ಮೆ ಭಯಾನಕ ಎನಿಸುವ ವಿಡಿಯೋಗಳು ವೈರಲ್​ ಆಗುತ್ತವೆ. ಮೊಸಳೆಯೊಂದು ಹಸುವಿನ ಮೇಲೆ ದಾಳಿ ಮಾಡಿರುವ ಭಯಾನಕ ವಿಡಿಯೋ ಇದೀಗ ವೈರಲ್​ ಆಗಿದೆ.

ಕೆರೆಯೊಂದರಲ್ಲಿ ನೀರು ಕುಡಿಯಲು ಬಂದಿರುವ ಹಸುವಿನ ಮೇಲೆ ಮೊಸಳೆಯೊಂದು ದಾಳಿ ಮಾಡಿರುವ ವಿಡಿಯೋ ಇದಾಗಿದೆ. ಮೊಸಳೆ ಅಲ್ಲಿ ಇರುವುದನ್ನು ಅರಿಯದ ಹಸುವೊಂದು ನೀರು ಕುಡಿಯಲು ಬರುತ್ತದೆ.

ಬಲಿಪಶುವಿಗಾಗಿ ಕಾದು ಕುಳಿತ ಮೊಸಳೆ ಅದನ್ನು ಹಿಡಿದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಸು ನೀರು ಕುಡಿಯುವವರೆಗೂ ಸುಮ್ಮನಿದ್ದು, ಅದು ವಾಪಸ್​ ಹೋಗುವ ವೇಳೆ ಹಿಂಬದಿಯಿಂದ ಮೊಸಳೆ ದಾಳಿ ಮಾಡಿದೆ.

ಕೆಲ ಸೆಕೆಂಡ್​ಗಳವರೆಗೆ ಮೊಸಳೆಯ ಬಿಗಿತದಿಂದ ತಪ್ಪಿಸಿಕೊಳ್ಳಲು ಹಸು ಹರಸಾಹಸ ಪಡುತ್ತದೆ. ಎಷ್ಟೇ ಮಾಡಿದರೂ ಮೊಸಳೆ ತನ್ನ ಆಹಾರವನ್ನು ಬಿಟ್ಟುಕೊಡಲು ರೆಡಿ ಇರುವುದಿಲ್ಲ. ಆದರೂ ಕೊನೆಗೆ ಅಂತೂ ಹಸು ತಪ್ಪಿಸಿಕೊಂಡು ಓಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಸುವಿನ ಮೈ ರಕ್ತಸಿಕ್ತವಾದದ್ದನ್ನು ಇದರಲ್ಲಿ ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...