alex Certify ಮದುವೆ ಮನೆಯ ಊಟದ ಕೋಣೆಯೊಳಗೇ ನುಗ್ಗಿದ ಗೂಳಿ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮನೆಯ ಊಟದ ಕೋಣೆಯೊಳಗೇ ನುಗ್ಗಿದ ಗೂಳಿ: ವಿಡಿಯೋ ವೈರಲ್​

ಇದು ಮದುವೆಯ ಸೀಸನ್ ಆಗಿರುವುದರಿಂದ ಈ ಸಂದರ್ಭದ ಕೆಲವು ಕುತೂಹಲದ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಚಮತ್ಕಾರಿ ವಿಡಿಯೋ ವೈರಲ್​ ಆಗಿದ್ದು, ಇದು ಮದುವೆ ಮನೆಗೆ ಗೂಳಿಯೊಂದು ನುಗ್ಗಿರುವುದನ್ನು ತೋರಿಸುತ್ತದೆ.

ಮದುವೆ ಮನೆಯಲ್ಲಿ ಡೆಕೋರೇಷನ್​ಗೆ ಮಾಡಲಾಗಿದ್ದ ಕೆಂಪು ಬಣ್ಣದ ಬಟ್ಟೆಯನ್ನು ನೋಡಿ ಗೂಳಿ ಆವೇಷದಿಂದ ನುಗ್ಗಿದಂತೆ ವಿಡಿಯೋದಲ್ಲಿ ಕಾಣಿಸುತ್ತಿದೆ.

ಸೀದಾ ಊಟದ ಮನೆಗೆ ನುಗ್ಗಿದ ಗೂಳಿ ಕೆಲಕಾಲ ಪ್ರದೇಶದಲ್ಲಿ ಆತಂಕ ಸೃಷ್ಟಿಸಿತು. ಕೇಟರಿಂಗ್ ಸೇವೆಗಳ ಸಿಬ್ಬಂದಿ ಗೂಳಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಕೊನೆಗೂ ಯಶಸ್ವಿಯಾದರು. ಇದನ್ನು ಅಲ್ಲಿದ್ದವರು ತಮ್ಮ ಕ್ಯಾಮೆರಾದಲ್ಲಿ ಚಿತ್ರಿಸಿ ಶೇರ್​ ಮಾಡಿಕೊಂಡಿದ್ದಾರೆ. ಇದೀಗ “ಆಹ್ವಾನಿಸದ ಅತಿಥಿ” ಎಂಬ ಶೀರ್ಷಿಕೆಯೊಂದಿಗೆ ವೈರಲ್​ ಆಗಿದೆ.

ಹಿಂದಿನ ಜನ್ಮದಲ್ಲಿ ಈ ಮದುಮಗಳು ಪರಿಚಯದವಳಾಗಿದ್ದಿರಬೇಕು. ಆಕೆಯನ್ನು ನೋಡಲು ಗೂಳಿ ಬಂದಿರಬೇಕು ಎಂದು ಕೆಲವರು ಹಾಸ್ಯಭರಿತ ಕಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...