alex Certify ತಲೆಕೆಳಗಾದ ಆಮೆಯನ್ನು ಕೊಂಬಿನಿಂದ ತಿರುಗಿಸಿದ ಎಮ್ಮೆ: ಹೃದಯಸ್ಪರ್ಶಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆಕೆಳಗಾದ ಆಮೆಯನ್ನು ಕೊಂಬಿನಿಂದ ತಿರುಗಿಸಿದ ಎಮ್ಮೆ: ಹೃದಯಸ್ಪರ್ಶಿ ವಿಡಿಯೋ ವೈರಲ್

ಪ್ರಾಣಿಗಳಲ್ಲಿಯೂ ಪರಸ್ಪರ ಸಹಾನುಭೂತಿ, ದಯೆ ತೋರುವ ಗುಣಗಳಿವೆ. ಅವುಗಳಿಗೆ ಮಾತನಾಡಲು ಬರದಿದ್ದರೂ ಪ್ರೀತಿ, ಕಾಳಜಿ, ಔದಾರ್ಯದಂತಹ ಗುಣಗಳಿವೆ. ಇದೀಗ, ಎಮ್ಮೆಯೊಂದು ತಲೆಕೆಳಗಾಗಿ ಬಿದ್ದಿದ್ದ ಆಮೆಗೆ ಸಹಾಯ ಮಾಡಿರೋ ವಿಡಿಯೋ ವೈರಲ್ ಆಗಿದೆ.

ಹೌದು, ಎಮ್ಮೆಯು ತನ್ನ ಕೊಂಬಿನಿಂದ ತಲೆಕೆಳಗಾಗಿ ಬಿದ್ದಿದ್ದ ಆಮೆಗೆ ಸಹಾಯ ಮಾಡುತ್ತಿರುವ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ, ತಲೆಕೆಳಗಾಗಿ ಬಿದ್ದಿದ್ದ ಆಮೆಯನ್ನು ಗುರುತಿಸಿದ ಎಮ್ಮೆಯು, ತನ್ನ ಕೊಂಬಿನ ಸಹಾಯದಿಂದ ಅದನ್ನು ಯಥಾಸ್ಥಿತಿಗೆ ತಂದಿದೆ. ವಿಡಿಯೋವನ್ನು ರೆಕಾರ್ಡ್ ಮಾಡುತ್ತಿದ್ದ ಅಲ್ಲಿದ್ದ ಜನರು ಎಮ್ಮೆಯನ್ನು ಹುರಿದುಂಬಿಸಿದ್ದಾರೆ.

SHOCKING NEWS: ರೇಬಿಸ್ ಕಾಯಿಲೆಗೆ ತುತ್ತಾಗಿದ್ದ ಕಾಲೇಜು ವಿದ್ಯಾರ್ಥಿನಿ ಸಾವು

ಈ ಅದ್ಭುತ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ. ಆಮೆಗೆ ಎಮ್ಮೆ ಸಹಾಯ ಮಾಡಿರುವುದು ಹಲವರನ್ನು ಅಚ್ಚರಿಗೊಳಿಸಿತು. ಇಲ್ಲಿನ ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚು ಸಹಾನುಭೂತಿ ಹೊಂದಿವೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಪ್ರಾಣಿಗಳು ಪರಸ್ಪರ ಕಾಳಜಿ ವಹಿಸುತ್ತವೆ ಅಂತಾ ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...