alex Certify ಡಾನ್ಸ್‌ ಮಾಡುತ್ತಲೇ ವರನನ್ನು ಮಂಟಪಕ್ಕೆ ಆಹ್ವಾನಿಸಿದ ವಧು…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾನ್ಸ್‌ ಮಾಡುತ್ತಲೇ ವರನನ್ನು ಮಂಟಪಕ್ಕೆ ಆಹ್ವಾನಿಸಿದ ವಧು…! ವಿಡಿಯೋ ವೈರಲ್

ಮೇರೆ ಸೈಯಾನ್​ ಸೂಪರ್​ಸ್ಟಾರ್​……ಹಾಡು ಚಿರಪರಿಚಿತ. 2015 ರ ಚಲನಚಿತ್ರ ಏಕ್​ ಪಹೇಲಿ ಲೀಲಾದ ಈ ಹಾಡು ಇಂದಿಗೂ ಕ್ರೇಜ್​ ಇಟ್ಟುಕೊಂಡಿದೆ. ತನ್ನ ಮದುವೆ ಸಮಾರಂಭದಲ್ಲಿ ವಧು ಒಬ್ಬಳು ಸುಂದರವಾಗಿ ಅಲಂಕಾರಗೊಂಡು ವರನನ್ನು ಈ ಹಾಡಿಗೆ ಸ್ಟೆಪ್​ ಹಾಕುವ ಮೂಲಕ ಸ್ವಾಗತಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ವರನನ್ನು ಸ್ವಾಗತಿಸುವ ಅನೇಕ ರಂಜನೀಯ ಸಂಪ್ರದಾಯವಿದೆ. ಅದರಲ್ಲಿ ನೃತ್ಯ ಮಾಡುವುದೂ ಒಂದಾಗಿದೆ. ಈ ವಿಡಿಯೋದಲ್ಲಿ ದಿಬ್ಬಣದೊಂದಿಗೆ ಮದುವೆ ನಡೆಯುವ ಸಭಾಂಗಣಕ್ಕೆ ಬಂದು ಕುಳಿತ ಸಂದರ್ಭದಲ್ಲಿ ವಧು ನೃತ್ಯ ಮಾಡುತ್ತಾ ಆತನನ್ನು ಆಹ್ವಾನಿಸುವುದನ್ನು ನೋಡಬಹುದಾಗಿದೆ.

ಸುಂದರವಾದ ಕೆಂಪು ಲೆಹೆಂಗಾವನ್ನು ಧರಿಸಿರುವ ವಧು ತನ್ನ ವರನ ಮುಂದೆ ಸೈಯಾನ್​ ಸೂಪರ್​ಸ್ಟಾರ್​… ಹಾಡಿಗೆ ನೃತ್ಯ ಮಾಡುತ್ತಾಳೆ. ಅತಿಥಿಗಳು ವಧು ಆರತಿ ಮಹಾಜನ್​ ಸ್ಟೆಪ್​ ಹಾಕಿದಾಗ ಚಪ್ಪಾಳೆ ತಟ್ಟುವುದನ್ನು ಸಹ ನೋಡಬಹುದು.

ಈ ವಿಡಿಯೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ‘ಫೋಟೋಶೂಟ್​ವೆಡ್ಡಿಂಗ್​’ ಪುಟವು ಹಂಚಿಕೊಂಡಿದೆ ಮತ್ತು 781ಕೆ ವೀಕ್ಷಣೆ ಮತ್ತು 38ಕೆ ಲೈಕ್​ನೊಂದಿಗೆ ವೈರಲ್​ ಆಗಿದೆ. ನೆಟ್ಟಿಗರು ವಧುವಿನ ಡ್ಯಾನ್ಸ್​ಗೆ ಪ್ರಭಾವಿತರಾಗಿದ್ದಾರೆ ಹಾಗೂ ವರನನ್ನು ವಧು ಸ್ವತಃ ಸ್ವಾಗತಿಸುವ ವಿಶಿಷ್ಟ ವಿಧಾನದಿಂದ ಖುಷಿಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...