alex Certify ಬಾಲ್ಕನಿಯಲ್ಲಿ ನಿಂತ ವಧುವಿನಿಂದ ವರನಿಗೆ ಫ್ಲೈಯಿಂಗ್ ಕಿಸ್ ಸ್ವಾಗತ – ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲ್ಕನಿಯಲ್ಲಿ ನಿಂತ ವಧುವಿನಿಂದ ವರನಿಗೆ ಫ್ಲೈಯಿಂಗ್ ಕಿಸ್ ಸ್ವಾಗತ – ವಿಡಿಯೋ ವೈರಲ್

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಕ್ಷಣವಾಗಿದೆ. ವಧು ಅಥವಾ ವರ ನೃತ್ಯ ಮಾಡುವುದು, ಹಾಡು ಹೇಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇಲ್ಲೊಂದೆಡೆ, ವಧು ವರನಿಗಾಗಿ ಕಾತುರದಿಂದ ಕಾಯುತ್ತಿರುವ ವಿಡಿಯೋ ವೈರಲ್ ಆಗಿದೆ.

ವೀಡಿಯೊದಲ್ಲಿ, ವಧು ತನ್ನ ವರನಿಗಾಗಿ ಕಾತುರದಿಂದ ಕಾಯುತ್ತಿರುವುದನ್ನು ಕಾಣಬಹುದು. ಆತ ಬರುವಾಗ ಮೇಲೆ ಬಾಲ್ಕನಿಯಲ್ಲಿ ನಿಂತ ವಧುವು ವರನಿಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾಳೆ. ವಧುವು ಸುಂದರವಾದ ಕೆಂಪು ಲೆಹೆಂಗಾ ಧರಿಸಿದ್ದಾಳೆ. ವರ ಮೆರವಣಿಗೆಯೊಂದಿಗೆ ಕಲ್ಯಾಣಮಂಟಪಕ್ಕೆ ಬರುವುದನ್ನೇ ಕಾಯುತ್ತಿದ್ದ ವಧುವು ಬಾಲ್ಕನಿಯತ್ತ ಓಡೋಡಿ ಬಂದಿದ್ದಾಳೆ.

ವಿಟ್ಟಿ ವೆಡ್ಡಿಂಗ್ ಹೆಸರಿನ ಖಾತೆಯು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಿದೆ. ಸದ್ಯ, ಈ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಕೂಡ ವಿಡಿಯೋ ನೋಡಿ ಖುಷಿಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...