alex Certify ರೈಲು ನಿಲ್ದಾಣದಲ್ಲಿ ಹುಡುಗನ ಬ್ಯಾಕ್ ​ಫ್ಲಿಪ್​ ಸ್ಟಂಟ್​, ಸೂಪರ್​ ಬ್ರೋ ಎಂದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ನಿಲ್ದಾಣದಲ್ಲಿ ಹುಡುಗನ ಬ್ಯಾಕ್ ​ಫ್ಲಿಪ್​ ಸ್ಟಂಟ್​, ಸೂಪರ್​ ಬ್ರೋ ಎಂದ ಜನ

ಭಾರತದಲ್ಲಿ ಪ್ರತಿಭೆಗಳಿಗೇನು ಕೊರತೆಯೇ ಇಲ್ಲ. ಈಗಂತೂ ಸಾಮಾಜಿಕ ಮಾಧ್ಯಮ ಈ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಕ್ಷಣಮಾತ್ರದಲ್ಲಿ ಖ್ಯಾತಿ ಪಡೆದುಬಿಡುತ್ತಾರೆ.

ಹುಡುಗನೊಬ್ಬ ರೈಲ್ವೆ ನಿಲ್ದಾಣದಲ್ಲಿ ಬ್ಯಾಕ್ ​ಫ್ಲಿಪ್​ ಪ್ರದರ್ಶಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದೆ. ಬೆರಗುಗೊಳಿಸುವಂತೆ ಆತನ ಸಾಹಸ ಅಲ್ಲಿದ್ದ ಜನರ ಹುಬ್ಬೇರುವಂತೆ ಮಾಡಿದೆ.

ವಿಡಿಯೋದಲ್ಲಿ ಕಾಣಿಸುವಂತೆ ಆ ಹುಡುಗ ರೈಲ್ವೇ ನಿಲ್ದಾಣದ ಪ್ಲಾಟ್ ​ಫಾಮ್​ರ್ನಲ್ಲಿ ಸಾಹಸ ಪ್ರದಶಿರ್ಸುತ್ತಾನೆ. ಸಾಕಷ್ಟು ಪ್ರಯಾಣಿಕರನ್ನು ಹೊಂದಿರುವ ರೈಲನ್ನು ಸಹ ಅಲ್ಲಿ ಕಾಣಬಹುದು. ಅಲ್ಲಿದ್ದವರೆಲ್ಲರೂ ಸಾಹಸವನ್ನು ವೀಕ್ಷಿಸುತ್ತಾರೆ. ಒಬ್ಬ ಪೋಲೀಸ್​ ಸಹ ಈ ಸಾಹಸಕ್ಕೆ ಸಾಕ್ಷಿಯಾಗುತ್ತಾನೆ. ಆ ಹುಡುಗನ ಚುರುಕುತನ ಕಂಡು ಪ್ರಭಾವಿತನಾಗುತ್ತಾನೆ.

ಕ್ರೇಜಿ ಫ್ಲಿಪ್ಪರ್​ ಎಂಬ ಹೆಸರಿನ ಕಂಟೆಂಟ್​ ಕ್ರಿಯೇಟರ್​ ಸೂರಜ್​ ಸಿಂಗ್​ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಬ್ಯಾಕ್​ಫ್ಲಿಪ್​ ಸಮಯದಲ್ಲಿ, ದೇಹವು ಗಾಳಿಯಲ್ಲಿ ಪೂರ್ಣ 360 ಡಿಗ್ರಿ ತಿರುಗುತ್ತದೆ.

ಜೂನ್​ 20ರಂದು ವಿಡಿಯೋ ಹಂಚಿಕೊಂಡಾಗಿನಿಂದ 2,94,813 ಕ್ಕೂ ಹೆಚ್ಚು ಲೈಕ್​ ಗಳಿಸಿದೆ. “ಸುರಕ್ಷಿತರಾಗಿರಿ ಬ್ರೋ’ ಎಂದು ಒಬ್ಬ ಬಳಕೆದಾರರು ಬರೆದರೆ ಮತ್ತೊಬ್ಬರು “ಸೂಪರ್​ ಬ್ರೋ” ಎಂದು ಕಾಮೆಂಟ್​ ಮಾಡಿದ್ದಾರೆ. ಹಾಗೆಂದು ನೀವು ಈ ಸ್ಟಂಟ್‌ ಟ್ರೈ ಮಾಡಲು ಹೋಗಬೇಡಿ. ಇದಕ್ಕೆ ಸಾಕಷ್ಟು ತರಬೇತಿ ಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...