alex Certify ಮಾರುಕಟ್ಟೆಯಲ್ಲಿ ‘ತರಕಾರಿ’ ಖರೀದಿ ಮಾಡುವ ಮುನ್ನ ಈ ವಿಡಿಯೋ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುಕಟ್ಟೆಯಲ್ಲಿ ‘ತರಕಾರಿ’ ಖರೀದಿ ಮಾಡುವ ಮುನ್ನ ಈ ವಿಡಿಯೋ ನೋಡಿ

ತರಕಾರಿ ವ್ಯಾಪಾರಿಯೊಬ್ಬ ಚರಂಡಿ ನೀರಿನಲ್ಲಿ ಕೊತ್ತಂಬರಿ ಸೊಪ್ಪನ್ನು ತೊಳೆದಿದ್ದು, ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಭೋಪಾಲ್​​ನ ಸಿಂಧಿ ಮಾರ್ಕೆಟ್​​​ನಲ್ಲಿ ಈ ಘಟನೆ ಸಂಭವಿಸಿದೆ. ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಯು ಈ ರೀತಿ ಮಾಡಬೇಡಿ ಎಂದು ಪದೇ ಪದೇ ಹೇಳಿದರೂ ಸಹ ಕೇಳದ ವ್ಯಾಪಾರಿ ಕೊಳಕು ನೀರಿನಲ್ಲಿ ಕೊತ್ತಂಬರಿ ಸೊಪ್ಪನ್ನು ತೊಳೆದಿದ್ದಾನೆ.

ಯಾಕೆ ಈ ರೀತಿಯ ಕೆಲಸ ಮಾಡಿದೆ ಎಂದು ಕೇಳಿದರೆ ವ್ಯಾಪಾರಿ ಇದಕ್ಕೆ ಯಾವುದೇ ಉತ್ತರವನ್ನು ನೀಡಿಲ್ಲ. ಈ ವಿಡಿಯೋವನ್ನು ನೋಡಿದರೆ ಯಾರೂ ನಿನ್ನ ಬಳಿ ತರಕಾರಿ ಖರೀದಿ ಮಾಡೋದಿಲ್ಲ ಎಂದು ವ್ಯಕ್ತಿಯು ಹೇಳುತ್ತಿರೋದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.

ಟ್ವಿಟರ್​ನಲ್ಲಿ ಈ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದೆ. ಗಮನಿಸಿ, ನಿಮ್ಮ ಆರೋಗ್ಯದ ಜೊತೆಯಲ್ಲಿ ಆಟವಾಡಲಾಗ್ತಿದೆ. ಈ ರೀತಿಯ ತರಕಾರಿಗಳನ್ನು ನೀವು ಖರೀದಿಸುತ್ತಿಲ್ಲ ಎಂದು ನಾನು ಭಾವಿಸಿದ್ದೇನೆ. ಭೋಪಾಲ್​ನ ಸಿಂಧಿ ಕಾಲೋನಿಯಲ್ಲಿ ತರಕಾರಿಯನ್ನು ಚರಂಡಿ ನೀರಿನಲ್ಲಿ ತೊಳೆಯಲಾಗಿದೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ತರಕಾರಿ ವ್ಯಾಪಾರಿಯ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ತರಕಾರಿ ವ್ಯಾಪಾರಿಯ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ.

— sudhirdandotiya (@sudhirdandotiya) October 26, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...