alex Certify ಅರುಣಾಚಲ ಸಿಎಂ ಭೇಟಿ ವೇಳೆ ರೆಜಿಮೆಂಟಲ್ ಹಾಡು ಪ್ರದರ್ಶಿಸಿದ ಯೋಧರು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರುಣಾಚಲ ಸಿಎಂ ಭೇಟಿ ವೇಳೆ ರೆಜಿಮೆಂಟಲ್ ಹಾಡು ಪ್ರದರ್ಶಿಸಿದ ಯೋಧರು: ವಿಡಿಯೋ ವೈರಲ್

ಇಟಾನಗರ: ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪ್ರೇಮಾ ಖಂಡು ಅವರು ಇಂಡೋ-ಟಿಬೆಟ್ ಗಡಿ ಸಮೀಪದ ತವಾಂಗ್ ಜಿಲ್ಲೆಯ ಚುನಾದಲ್ಲಿ ಭಾರತೀಯ ಸೇನೆಯ ಯೋಧರೊಂದಿಗೆ ಸಂವಾದ ನಡೆಸಿದ್ದಾರೆ.

ಸಿಎಂ ಭೇಟಿಯ ವೇಳೆ ಅರುಣಾಚಲ ಸ್ಕೌಟ್ಸ್‌ನ ಯೋಧರು ತಮ್ಮ ರೆಜಿಮೆಂಟಲ್ ಗೀತೆಯನ್ನು ಪ್ರದರ್ಶಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಉತ್ತರ ಪುರಬ್ ಸೇ ಆಯೆ ಹಮ್ ನೌಜವಾನ್, ದೇಶ್ ಕಿ ರಕ್ಷಾ ಕರ್ನೆ ಆಯಾ ಹೈ ಎಂದು ಯೋಧರು ಹಾಡಿದ್ದಾರೆ. ಇದನ್ನು ಇಂಡೋ-ಟಿಬೆಟ್ ಗಡಿಯನ್ನು ರಕ್ಷಿಸಲು, 2010ರಲ್ಲಿ ಅರುಣಾಚಲದ ಮಾಜಿ ಸಿಎಂ ದಿವಂಗತ ದೋರ್ಜಿ ಖಂಡು ಜಿ ಅವರ ನೆನಪಲ್ಲಿ ಸ್ಥಾಪಿಸಲಾಯಿತು ಎಂದು ಟ್ವೀಟ್ ನಲ್ಲಿ ಖಂಡು ತಿಳಿಸಿದ್ದಾರೆ.

ಸದ್ಯ, ಟ್ವಿಟ್ಟರ್ ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, 30,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಜವಾನರ ರೆಜಿಮೆಂಟಲ್ ಹಾಡಿನ ಪ್ರದರ್ಶನವನ್ನು ವೀಕ್ಷಿಸಿದ ನೆಟ್ಟಿಗರು ಖುಷಿಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...