alex Certify Viral Video: ಕೋಪಗೊಂಡ ಜಿಂಕೆಯಿಂದ ಬೇಟೆಗಾರನ ಮೇಲೆ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ಕೋಪಗೊಂಡ ಜಿಂಕೆಯಿಂದ ಬೇಟೆಗಾರನ ಮೇಲೆ ದಾಳಿ

ಜಿಂಕೆಗಳು ಸಾಮಾನ್ಯವಾಗಿ ದಾಳಿ ಮಾಡುವ ಸ್ವಭಾವ ಹೊಂದಿರುವುದೇ ಇಲ್ಲ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಕೋಪಗೊಂಡ ಜಿಂಕೆಯು ಬೇಟೆಗಾರನ ಮೇಲೆ ದಾಳಿ ಮಾಡಿ ಅವನ ಕಣ್ಣುಗಳಿಗೆ ಹಾನಿ ಮಾಡಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಬೇಟೆಗಾರ ಬೇಟೆಗಾಗಿ ಪ್ರಾಣಿಯ ಬರುವಿಕೆಗೆ ಅಡಗಿ ಕುಳಿತಿದ್ದು, ಈ ಸಂದರ್ಭದಲ್ಲಿ ಕ್ಷಣಮಾತ್ರದಲ್ಲಿ ಎರಗಿ ಬರುವ ಜಿಂಕೆ ತನ್ನ ಕೋಡಿನಿಂದ ಆತನನ್ನು ಅಷ್ಟೇ ವೇಗದಲ್ಲಿ ಗುದ್ದಿ ಓಡಿಬಿಡುತ್ತದೆ. ಜಿಂಕೆಯ ಹೊಡೆತಕ್ಕೆ ನೆಲಕ್ಕುರುಳುವ ಬೇಟೆಗಾರನ ಬಂದೂಕು ರಕ್ತಸಿಕ್ತವಾಗಿ ಕೆಳಗೆ ಬಿದ್ದುಹೋಗುತ್ತದೆ. ಕಣ್ಣಿನ ಸುತ್ತಮುತ್ತ ರಕ್ತಮಯವಾಗುತ್ತದೆ. ಇದೆಲ್ಲ ಘಟನೆಯನ್ನು ಬೇಟೆಗಾರ ತನ್ನ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾನೆ.

BIG NEWS: ಆಟೋ ಮೇಲೆ ಬಿದ್ದ ಹೈಟೆನ್ಶನ್ ವಿದ್ಯುತ್ ವೈಯರ್; 8 ಜನರು ಸಜೀವ ದಹನ

ಈ ಜಿಂಕೆಗಳು ಚಿತಾಲ್​ ಎಂದೂ ಕರೆಯಲ್ಪಡಲಾಗುತ್ತದೆ. ಈ ಜಿಂಕೆ ದಾಳಿಯ ವಿಡಿಯೋ ಸಾಕಷ್ಟು ವೈರಲ್​ ಆಗಿದ್ದು, ಲಕ್ಷಾಂತರ ವೀಕ್ಷಣೆ ಕಂಡಿದೆ. ಅನೇಕ ಟ್ವಿಟ್ಟರ್​ ಬಳಕೆದಾರರು ಬೇಟೆಗಾರ ಅರ್ಹವಾದದ್ದನ್ನು ಪಡೆದಿದ್ದಾನೆ ಎಂದು ಜಿಂಕೆಯ ಪರವಾಗಿ ಅಭಿಪ್ರಾಯ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...