alex Certify ಅಡುಗೆ ಮನೆಯೊಳಗೆ ಅಡಗಿ ಕುಳಿತಿದ್ದ ಹಾವಿನ ರಕ್ಷಣೆ: ಹಳೆ ವಿಡಿಯೋ ಮತ್ತೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಮನೆಯೊಳಗೆ ಅಡಗಿ ಕುಳಿತಿದ್ದ ಹಾವಿನ ರಕ್ಷಣೆ: ಹಳೆ ವಿಡಿಯೋ ಮತ್ತೆ ವೈರಲ್

ಭುವನೇಶ್ವರ: ನಾಗರಹಾವನ್ನು ಧೈರ್ಯ ಹಾಗೂ ಚಮತ್ಕಾರದಿಂದ ರಕ್ಷಿಸಿದ ಹಳೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ.

ಒಡಿಶಾದ ಭದ್ರಕ್‌ನಲ್ಲಿರುವ ವ್ಯಕ್ತಿಯೊಬ್ಬರ ಮನೆಯ ಅಡುಗೆಮನೆಯೊಳಗೆ ನಾಗರಹಾವು ಸೇರಿಕೊಂಡಿತ್ತು. ಈ ವಿಡಿಯೋವನ್ನು ಕಳೆದ ವರ್ಷ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು, ಇದೀಗ ಮತ್ತೆ ವೈರಲ್ ಆಗಿದೆ. ಅಡುಗೆ ಮನೆಗೆ ಎಂಟ್ರಿ ಕೊಟ್ಟ ನಾಗರಾಜ ಗ್ಯಾಸ್ ಸಿಲಿಂಡರ್ ಹಿಂದೆ ಅಡಗಿಕೊಂಡಿತ್ತು.

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಕೆನರಾ ಬ್ಯಾಂಕಿನಿಂದ ‘ಬಂಪರ್’ ಆಫರ್

ಸ್ಥಳಕ್ಕೆ ಬಂದ ಉರಗತಜ್ಞ ಹಾವು ಹಿಡಿಯುವ ಕಾರ್ಯಾಚರಣೆಯನ್ನು ಕೈಗಿತ್ತಿಕೊಂಡಿದ್ದಾರೆ. ಈ ವೇಳೆ ಹಾವು ದಾಳಿ ಮಾಡಲು ಯತ್ನಿಸಿದೆ. ಅನುಭವಿಯಾಗಿದ್ದರಿಂದ ಹಾವನ್ನು ಹಿಡಿಯುವ ಕಲೆ ಅವರಿಗೆ ಬಹಳ ಚೆನ್ನಾಗಿ ತಿಳಿದಿತ್ತು. ಹೀಗಾಗಿ ಬಹಳ ನಾಜೂಕಾಗಿ ಹಾವನ್ನು ಹಿಡಿದಿದ್ದಾರೆ. ಪ್ಲಾಸ್ಟಿಕ್ ಬಾಕ್ಸೊಳಗೆ ಹಾವನ್ನು ಸೇರಿಸಿದ ಬಳಿಕ, ಕೂಡಲೇ ಅದರ ಮುಚ್ಚಳವನ್ನು ಮುಚ್ಚಿದ್ದಾರೆ. ನಂತರ ಹಾವು ಸರಾಗವಾಗಿ ಉಸಿರಾಡುವುದಕ್ಕಾಗಿ ಪ್ಲಾಸ್ಟಿಕ್ ಬಾಟಲ್ ಅನ್ನು ತೂತು (ರಂಧ್ರ) ಮಾಡಿದ್ದಾರೆ.

ಇಡೀ ಕಾರ್ಯಾಚರಣೆಯ ದೃಶ್ಯವನ್ನು ನೆರೆದಿದ್ದವರು ತಮ್ಮ ಫೋನ್ ನಲ್ಲಿ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ವಿಡಿಯೋ ಇಲ್ಲಿಯವರೆಗೆ 30 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...