alex Certify ಚಪ್ಪಲಿ ಧರಿಸಿದ ಮುದ್ದಾದ ಬೆಕ್ಕು, ನೆಟ್ಟಿಗರು ಫುಲ್​ ಖುಷ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಪ್ಪಲಿ ಧರಿಸಿದ ಮುದ್ದಾದ ಬೆಕ್ಕು, ನೆಟ್ಟಿಗರು ಫುಲ್​ ಖುಷ್​

ಪ್ರಾಣಿ ಪ್ರಿಯರು ತಮ್ಮ ಮನೆಯೆ ಸಾಕು ಪ್ರಾಣಿಗಳಿಗೆ ಒಂದಷ್ಟು ಅಲಂಕಾರ ಮಾಡುವುದನ್ನು ನೋಡಿರುತ್ತೇವೆ. ನಾಯಿಗೆ ಶರ್ಟ್​ ಹಾಕುವುದು, ಟೋಪಿ, ಕನ್ನಡಕ ಹಾಕುವುದು, ಹಸುವಿಗೆ ಗೆಜ್ಜೆ ಕಟ್ಟುವುದು ಹೀಗೆ ಬೇರೆ ಬೇರೆ ರೂಪದಲ್ಲಿ ತಮ್ಮ ಆಸಕ್ತಿಯನ್ನು ತೋರಿಸಿ ಖುಷಿಪಟ್ಟಿರುತ್ತಾರೆ.

ಇಲ್ಲೊಂದು ವಿಡಿಯೋದಲ್ಲಿ ಕಾಣಿಸಿರುವಂತೆ ಬೆಕ್ಕಿಗೆ ಅದರ ಮಾಲಿಕರು ಪುಟ್ಟ ಚಪ್ಪಲಿ ಹಾಕಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಖುಷಿಪಟ್ಟಿದ್ದಾರೆ.

ತಿನ್ನುವುದರಲ್ಲಿ ಸಂರ್ಪೂಣವಾಗಿ ಮುಳುಗಿರುವಾಗ, ಬೆಕ್ಕು ಕುರ್ಚಿಯ ಮೇಲೆ ನಿಂತಿರುವಾಗ ಹಸಿರು ಮತ್ತು ಹಳದಿ ಬಣ್ಣದ ಹವಾಯಿ ಚಪ್ಪಲಿಯನ್ನು ಧರಿಸಿರುವುದು ಕಂಡುಬರುತ್ತದೆ. ಸ್ಲಿಪ್ಪರ್​ ಬೆಕ್ಕಿನ ಸಣ್ಣ ಪಾದಗಳಿಗೆ ಸಂರ್ಪೂಣವಾಗಿ ಹೊಂದಿಕೊಳ್ಳುವ ಕಾರಣ ಇದು ತುಂಬಾ ಮುದ್ದಾಗಿ ಕಾಣಿಸುತ್ತದೆ.

ಅಬಿಸ್​ ನೇಚರ್​ ಎಂಬ ಟ್ವಿಟರ್​ ಖಾತೆಯು ವಿಡಿಯೊವನ್ನು ಹಂಚಿಕೊಂಡಿದೆ. ವಿಡಿಯೊವನ್ನು ಮೂಲತಃ ಅನಾ ಎಮೆರಿಚ್​ ಎಂಬ ಟ್ವೀಟರ್​ ಬಳಕೆದಾರರು ಹಂಚಿಕೊಂಡಿದ್ದಾರೆ, ಇದು 7.3 ಮಿಲಿಯನ್​ ವೀಕ್ಷಣೆ ಪಡೆದಿದ್ದು, 37,000 ಕ್ಕೂ ಹೆಚ್ಚು ರಿಟ್ವೀಟ್​ಗಳನ್ನು ಪಡೆದುಕೊಂಡಿದೆ.

ಸಾವಿರಾರು ಕಾಮೆಂಟ್​ ಮಾಡಿದ್ದು, ‘ನನ್ನ ಬೆಕ್ಕಿಗೆ ಸ್ವಲ್ಪ ಚಪ್ಪಲಿಗಳನ್ನು ತರಬೇಕು’ ಎಂಬ ಒಬ್ಬರ ಕಾಮೆಂಟ್​ ಗಮನ ಸೆಳೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...