alex Certify ವಿಡಿಯೋ: ನೆಟ್ಟಿಗರ ಮನಗೆದ್ದ ಏಳರ ಪೋರನ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ನೆಟ್ಟಿಗರ ಮನಗೆದ್ದ ಏಳರ ಪೋರನ ಡಾನ್ಸ್

ಮನಸ್ಸಿಗೂ ದೇಹಕ್ಕೂ ಉಲ್ಲಾಸ ತುಂಬುವ ನೃತ್ಯವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ದಿನಂಪ್ರತಿ ಬಹಳಷ್ಟು ಡ್ಯಾನ್ಸ್‌ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ.

ಇಂಥದ್ದೇ ಒಂದು ವಿಡಿಯೋದಲ್ಲಿ ಏಳು ವರ್ಷದ ಬಾಲಕನೊಬ್ಬನ ನೃತ್ಯ ನೆಟ್ಟಿಗರ ಮನಸೂರೆಗೊಂಡಿದೆ. ಹಿಮಾಂಕ್ ಮಿಶ್ರಾ ಹೆಸರಿನ ಈ ಬಾಲಕ ಅಂಗ್ರೇಜ಼ೀ ಬೀಟ್‌ ಹಾಡಿಗೆ ಮಸ್ತ್ ಸ್ಟೆಪ್‌ಗಳನ್ನು ಹಾಕಿದ್ದಾನೆ.

ಗುರುಗ್ರಾಮದಲ್ಲಿ ಸೆಕ್ಸ್ ದಂಧೆ ಭೇದಿಸಿದ ಪೊಲೀಸರು: ಇಬ್ಬರು ವಿದೇಶಿ ಪ್ರಜೆಗಳು ಅಂದರ್

17 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ತ್ರೀಪೀಸ್ ಸೂಟ್‌ನಲ್ಲಿ ಕಂಗೊಳಿಸುತ್ತಿರುವ ಹಿಮಾಂಕ್, ಮದುವೆ ಸಮಾರಂಭವೊಂದರ ಡಿಜಿ ನೆಲದ ಮೇಲೆ ಕುಣಿದು ಕುಪ್ಪಳಿಸಿದ್ದಾನೆ. ಯೋ ಯೋ ಹನಿ ಸಿಂಗ್‌ರ ಕ್ಯಾಚೀ ಬೀಟ್‌ಗಳಿಗೆ ಸೂಪರ್‌ ಸ್ಟೆಪ್ ಹಾಕುತ್ತಿರುವ ಈತನ ಉತ್ಸಾಹ ನೋಡುಗರಿಗೆ ಮುದ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...