alex Certify Viral Video: ತಂದ ದಿನವೇ ಅಪಘಾತಕ್ಕೀಡಾಯ್ತು ಹೊಚ್ಚಹೊಸ ಕಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ತಂದ ದಿನವೇ ಅಪಘಾತಕ್ಕೀಡಾಯ್ತು ಹೊಚ್ಚಹೊಸ ಕಾರು

ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿ ಗಾಬರಿಯಲ್ಲಿ ನಿಲ್ಲಿಸಿದ್ದ ಬೈಕ್ ​ಗಳ ಮೇಲೆ ಕಾರನ್ನು ಹತ್ತಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಿಸಿಟಿವಿ ದೃಶ್ಯಾವಳಿ ಪ್ರಕಾರ, ಮುಂಭಾಗದಲ್ಲಿ ಹಾರವನ್ನು ಹಾಕಲಾಗಿರುವ ಟಾಟಾ ನೆಕ್ಸಾನ್​ ಹೊಸ ಕಾರಿನಂತೆ ಕಾಣಿಸುತ್ತದೆ. ವಸತಿ ಸಮುಚ್ಚಯದ ಬಳಿ ನಿಲ್ಲಿಸಿದ ಬೈಕ್​ಗಳ ಸಾಲಿಗೆ ಕಾರು ಡಿಕ್ಕಿ ಹೊಡೆಯುವುದನ್ನು ಕಾಣಬಹುದು.

ಕಾರು ಸಮೀಪಿಸುತ್ತಿರುವುದನ್ನು ನೋಡಿದ ವ್ಯಕ್ತಿಯೊಬ್ಬರು ಗೇಟ್​ ತೆರೆದು ಪಕ್ಕಕ್ಕೆ ನಿಲ್ಲುತ್ತಾರೆ, ಅದಕ್ಕೆ ಪಾರ್ಕಿಂಗ್ ​ಗಾಗಿ ದಿಕ್ಕನ್ನು ಸಹ ತೋರಿಸುತ್ತಾರೆ. ಟಾಟಾ ನೆಕ್ಸಾನ್​ ನೇರವಾಗಿ ನಿಲ್ಲಿಸಿದ ಬೈಕುಗಳ ಮೇಲೆ ಅಪ್ಪಳಿಸುತ್ತದೆ. ಒಂದು ಹಂತದಲ್ಲಿ ಸಮತೋಲನ ಕಳೆದುಕೊಂಡು ಒಂದು ಬದಿಗೆ ಉರುಳುತ್ತದೆ. ಗೇಟ್​ ತೆಗೆದು‌ ಡೈರೆಕ್ಷನ್​ ನೀಡಿದ ವ್ಯಕ್ತಿ ಚಾಲಕನ ಸಹಾಯಕ್ಕೆ ಧಾವಿಸಿದ್ದು, ಸಕ್ಯುರಿಟಿ ಗಾರ್ಡ್​ ಓಡಿ ಬರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಅಷ್ಟರಲ್ಲೇ ಹತ್ತಾರು ಬೈಕ್​ ಜಖಂ ಆಗಿರುತ್ತದೆ.

ಮನೆಗೆ ಗ್ರಾಂಡ್​ ಆಗಮನ ಎಂದು ವೀಡಿಯೊವನ್ನು ಹಂಚಿಕೊಂಡ ಟ್ವಿಟ್ಟರ್​ ಬಳಕೆದಾರರು ಬರೆದಿದ್ದಾರೆ. ಈ ವೀಡಿಯೊ ಟ್ವಿಟ್ಟರ್​ ಬಳಕೆದಾರರನ್ನು ವಿವಿಧ ಕಮೆಂಟ್‌ ಗಳಿಗೆ ಆಸ್ಪದ ನೀಡಿದ್ದು, ಅನೇಕರು ಅಪಘಾತ ಹೇಗೆ ಸಂಭವಿಸಿರಬಹುದು ಎಂಬುದರ ವಿವರಣೆ ನೀಡಲು ಪ್ರಯತ್ನಿಸಿದರು.

— Sqn Ldr Vinod Kumar (Retd) (@veekay122002) October 7, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...